ಕಾಂಗ್ರೆಸ್ ಅಭ್ಯರ್ಥಿಗಳ ಪರ ಲಾಡ್ ಪ್ರಚಾರ

ಬಳ್ಳಾರಿ ಏ 21 : ನಗರದ ಮಾಜಿ ಶಾಸಕ ಅನಿಲ್ ಲಾಡ್ ಅವರು 1 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ
ವೀರೇಂದ್ರಕುಮಾರ್ ಅವರ ಪರವಾಗಿ ನಿನ್ನೆ ಸಂಜೆ ಪಾರ್ವತಿ ನಗರ ಮತ್ತು ಈಶ್ವರ ಗುಡಿ ಹಾಗೂ ಹರಿಶ್ಚಂದ್ರ ನಗರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಪಕ್ಷದ ಮುಖಂಡರುಗಳಾದ ವೆಂಕಟೇಶ್ ಹೆಗಡೆ, ಕೊಳಗಲ್ ಅಂಜಿನಿ, ಪಾರ್ಥಸಾರಥಿ ರೆಡ್ಡಿ, ಸರ್ದಾರ್, ವಿಜಯನಂದ, ಬಾಬು ಮೊದಲಾದವರು ಇದ್ದರು.