ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ನಾಗೇಂದ್ರ ಪ್ರಚಾರ

ಬಳ್ಳಾರಿ ಏ 25 : ನಗರದ 23 ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪಿ.ಗಾದೆಪ್ಪ ಪರ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಪ್ರಚಾರ ನಡೆಸಿ, ಗಾದೆಪ್ಪ ಅವರ ಸಮಾಜಿಕ ಕಳಕಳಿಯನ್ನು ಮತದಾರರಿಗೆ ತಿಳಿಸಿ ಇಂತಹವರನ್ನು ಆಯ್ಕೆ ಮಾಡುವ ಮೂಲಕ ಪಾಲಿಕೆಯ ಘನತೆಯನ್ನು ಹೆಚ್ಚಿಸಬೇಕು ಎಂದರು.
ನಂತರ ಅವರು 20ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ವಿವೇಕ್ ( ವಿಕ್ಕಿ) ಅವರ ಪರ ವಾರ್ಡ್ ವ್ಯಾಪ್ತಿಯ ನಾನಾ ಕಡೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ವಿವೇಕ್ ( ವಿಕ್ಕಿ) ಬುಡಾ ಮಾಜಿ ಅಧ್ಯಕ್ಷ ಜೆ.ಎಸ್.ಆಂಜಿನೇಯಲು, ಮುಖಂಡರಾದ ಗೋಪಿ, ಮಲ್ಲಿ, ಹಿರೀಯ ನ್ಯಾಯವಾದಿ ಡಾಣಾಪೂರ್ ಶ್ರೀನಿವಾಸ್, ಪಟೇಲ್ ನಗರ ರಾಜೇಶ್, ರಫೀಕ್, ಶರ್ಮಾಸ್ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಇದ್ದರು.
ಬಳಿಕ 18 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮುಲ್ಲಂಗಿ ನಂದೀಶ ಪರ ಆ ವಾರ್ಡ್‍ನ ಬಿಸಿಲಹಳ್ಳಿ ಮೊದಲಾದೆಡೆ ಸಂಚರಿಸಿ ಮತಯಾಚಿಸಿದರು. ಅಲ್ಲದೆ ವಾರ್ಡ್ ವ್ಯಾಪ್ತಿಯ ಜನತಾ ನಗರದಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಟಿ.ಸುರೇಶ್, ಕೆ.ನಾಗೇಂದ್ರಪ್ಪ, ಜೆ. ಎರ್ರಿಸ್ವಾಮಿ, ದೇವಣ್ಣ, ಕೆ.ನರೇಶ, ಹಾಗೂ ವಾರ್ಡ್‍ನ ಮುಖಂಡರು ಉಪಸ್ಥಿತರಿದ್ದರು.