ಕಾಂಗ್ರೆಸ್ ಅಧಿಕಾರದ ಹಗಲು ಕನಸು ಕಾಣುತ್ತಿದೆ : ಕಟೀಲ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.16 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಹಗಲು ಕನಸು ಕಾಣುತ್ತಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
 ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪಿಯುಸಿ ಕಾಲೇಜ್ ಅವರಣದಲ್ಲಿ ಬುಧವಾರ ಬಿಜೆಪಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಗಲು ಪೈಪೋಟಿ ನಡೆಯುತ್ತದೆ ಅವರು ಅಧಿಕಾರಕ್ಕೆ ಬರುವುದು ದೂರದ ಮಾತು ಹುಲಿ ಕಾಡಿಗೆ ಹೋಗುತ್ತೆ ಬಂಡೆ ನುಚ್ಚುನೂರಾಗುತ್ತೆ ಕಮಲ ಅರಳುತ್ತೆ ಮತ್ತೆ ಡಬಲ್ ಇಂಜಿನ್ ಸರ್ಕಾರ ಬರುತ್ತದೆ. ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಇಲ್ಲ ಅದಕ್ಕೆ ಅವರು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುತ್ತೆ ಬಿಜೆಪಿ ಪಕ್ಷ ಗೆಲ್ಲುತ್ತಾರೆ ಹಾಲಿ ಶಾಸಕ ಭೀಮ ನಾಯ್ಕ್ ಕಾಶಿ ಯಾತ್ರೆಗೆ ಹೋಗುತ್ತಾರೆ ಎಂದರು
 ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ ದೇಶದ ಆರ್ಥಿಕ ಸ್ಥಿತಿ ಸುಧಾಸಿದೆ ಎಂದರೆ ಅದು ಪ್ರಧಾನಿ ಮಂತ್ರಿ ನರೇಂದ್ರ ನರೇಂದ್ರ ಮೋದಿಯಿಂದ. ಆರ್ಥಿಕತೆಯಲ್ಲಿ ವಿಶ್ವದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕೊರೋನಾ ಸಂದರ್ಭದಲ್ಲಿ ಮುಂದುವರೆದ ರಾಷ್ಟ್ರಗಳು ಸಂಕಷ್ಟದಲ್ಲಿರುವಾಗ ದೇಶದಿಂದ ವ್ಯಾಕ್ಸಿನನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೈಗೊಂಡ ಕ್ರಮಗಳು ಇಡೀ ವಿಶ್ವವೇ ಕೊಂಡಾಡಿದೆ. ಕಾಂಗ್ರೆಸ್ ನವರು ಪ್ರಜಾ ಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಬಸ್ ಇಂಜಿನ್ ಸೀಜಾಗಿದೆ. ಆ ಪಕ್ಷ ಐಸಿಯುನಲ್ಲಿದೆ ಚುನಾವಣೆಯ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದರು.
 ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿಕೆ ಅರುಣಾ, ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಸಂಸದ ದೇವೇಂದ್ರಪ್ಪ  ಮಾತನಾಡಿದರು.
 ಈ ಸಂದರ್ಭದಲ್ಲಿ ಮುಖಂಡರಾದ ಕ್ಷೇತ್ರದ ಉಸ್ತುವಾರಿ ನಂಜನಗೌಡ್ರು, ವಿಭಾಗೀಯ ಪ್ರಭಾರಿ ಸಿದ್ದೇಶ್ ಯಾದವ್, ಯಾತ್ರೆಯ ಸಂಚಾಲಕ ಹನುಮಂತಪ್ಪ, ಪ್ರಮುಖರಾದ  ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಲಕ್ಷ್ಮೀನಾರಾಯಣ, ಬಲ್ಲಾಹುಣಿಸಿ ರಾಮಣ್ಣ, ಜಯಪ್ರಕಾಶ್, ಮಲ್ಲಿಕಾರ್ಜುನ್ ನಾಯ್ಕ್, ದೀನಾ ಮಂಜುನಾಥ್, ಎಲ್ ಬೀಮ ನಾಯ್ಕ್, ಕೃಷ್ಣ ನಾಯ್ಕ್, ಭದ್ರವಾಡಿ ಚಂದ್ರಶೇಖರ್ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಎಂ ವೀರೇಶ್ವರ ಸ್ವಾಮಿ, ಕಾರ್ಯದರ್ಶಿ ಬ್ಯಾಟಿ ನಾಗರಾಜ್ ಇತರರಿದ್ದರು.