ಕಾಂಗ್ರೆಸ್ ಅಧಿಕಾರಕ್ಕೆ ಬಂದರೆನುಡಿದಂತೆ ನಡೆಯುತ್ತದೆ: ನಾಸೀರ್ ಹುಸೇನ್


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,7- ಇಂದು ಇಲ್ಲಿನ  ಹುಸೇನ್ ನಗರ ,ಇಂಟೋರಿ ನಗರ ಹಾಗು 21ನೇ ವಾರ್ಡ್‌ ನ ವಿವಿಧ ಪ್ರದೇಶಗಳಿಗೆ ಮನೆ ಮನೆಗೆ ತೆರಳಿದ ಕಾಂಗ್ರೆಸ್ ಪಕ್ಷದ ಮುಖಂಡರಾದ  ನಾರಾ ಪ್ರತಾಪ್ ರೆಡ್ಡಿ, ಅವರ ಪತ್ನಿ  ನಾರಾ ಶೈಲಜ, ಸ್ಥಳೀಯ ಪಾಲಿಕೆ ಸದಸ್ಯ ಪೇರಂ ವಿವೇಕ್  ಮೊದಲಾದವರು ಮತಯಾಚನೆ ಮಾಡಿದರು.
ಇದಕ್ಕೂ ಮುನ್ನ ಹುಸೇನ್ ನಗರದ 9ನೇ ಕ್ರಾಸ್‌ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾತಾನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ನುಡಿದಂತೆ ನಡೆಯುತ್ತದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ,ಅದೇ ರೀತಿ ನಾವು ರಾಜ್ಯದ ಜನತೆಗೆ ಐದು ಗ್ಯಾರಂಟಿ ಗಳನ್ನು ನೀಡಿದ್ದೇವೆ. ಅವನ್ನು ತಪ್ಪದೆ ಜಾರಿಗೆ ತರಲಿದೆ‌  ಬಳ್ಳಾರಿ ಅಭಿವೃದ್ಧಿ ಆಗಬೇಕಾದರೆ ಯುವ ಅಭ್ಯರ್ಥಿ ನಾರಾ ಭರತ್ ರೆಡ್ಡಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ನಂತರ ಮಾತಾನಾಡಿದ ನಾರಾ ಪ್ರತಾಪರೆಡ್ಡಿ ಅವರು. ಯುವನಾಯಕ  ನಾರಾಭರತ್ ರೆಡ್ಡಿ ಅವರಿಗೆ ಮತಹಾಕಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ  ಮುಖಂಡರಾದ ವಲೀಸಾಬ್ ,ಅಲಕುಂದಿ ವಿಜಯ್ ,ಜಾನೆಕುಂಟೆ ಸಣ್ಣ ಬಸವರಾಜ (ಕುಮ್ಮಿ) , ನಾರಾಯಣರೆಡ್ಡಿ, ಆರ್,ವೈ,ಹನುಮಂತ ರೆಡ್ಡಿ, ಶ್ರೀ ಕಾಂತರೆಡ್ಡಿ, ಓಬಳರೆಡ್ಡಿ, ಶಿವುಕುಮಾರ್, ವಾಸುರೆಡ್ಡಿ, ವೇಣುಗೋಪಾಲ, ವೀರಾರೆಡ್ಡಿ ಇನ್ನಿತರರು ಭಾಗವಹಿಸಿದ್ದರು.