
ಸಂಜೆವಾಣಿ ವಾರ್ತೆ
ಸಂಡೂರು:ಮೇ: 4: ರಾಜ್ಯದಲ್ಲಿ ಕಾಂಗ್ರೇಸ್ ಅಲೆ ಇದ್ದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ 135 ರಿಂದ 150 ಸ್ಥಾನಗಳನ್ನು ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.
ಅವರು ಹಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ಹಾಗೂ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ಸೇರಿ 10 ಕ್ಷೇತ್ರಗಳಲ್ಲಿ ಗೆಲುವು ಖಚಿತ, ಈ.ತುಕರಾಂ ಅವರು ದಾಖಲೆ ಮತಗಳಿಂದ ವಿಜಯಶಾಲಿಯಾಗುವುದು ಖಚಿತ, ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಮನಮೋಹನ್ ಸಿಂಗ್ ರಾಜ್ಯಕ್ಕೆ 2 ಬಾರಿ ಭೇಟಿ ನೀಡಿದರು, ಅದರೆ ಬಿಜೆಪಿಯ ಪ್ರಧಾನಿ ನೆರೆ ಬಂದರೂ ಸಹ ರಾಜ್ಯಕ್ಕೆ ಬರಲಿಲ್ಲ, ಅದರೆ ಈಗ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನಿತ್ಯ ಬರುತ್ತಿದ್ದಾರೆ ಇದು ಬಿಜೆಪಿ ಸೋಲು ಒಪ್ಪಿಕೊಂಡಂತಾಗಿದೆ, ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾದಲ್ಲಿ ಟ್ರಂಪ್ ಅವರನ್ನು ಗೆಲ್ಲಿಸಲು ಹೋಗುತ್ತಾರೆ, ಭಾರತದ ಯಾವ ಪ್ರಧಾನಿ ಈ ರೀತಿ ಕೆಲಸ ಮಾಡಿರಲಿಲ್ಲ, ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಡಿಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಕೇವಲ 395 ಇತ್ತು, ಅದರೆ ಇಂದು 1200 ರೂಪಾಯಿಗೆ ಹೆಚ್ಚಿದೆ, ಕೆಲಸ ಕೊಡುತ್ತೇವೆ ಎಂದು ಮೋದಿ ನಿರುದ್ಯೋಗ ಹೆಚ್ಚಿಸಿದರು, 156 ಲಕ್ಷ ಕೋಟಿ ಸಾಲ ಮಾಡುವ ಮೂಲಕ ದೇಶವನ್ನು ಸಾಲದ ಶೂಲದಲ್ಲಿ ತಳ್ಳುತ್ತಿದ್ದಾರೆ, ಪತ್ನಿಯನ್ನೇ ರಕ್ಷಿಸದ ಮೋದಿ ಇನ್ನು ದೇಶದ ಜನರನ್ನು ಹೇಗೆ ರಕ್ಷಿಸಿಯಾರು ಎಂದು ಪ್ರಶ್ನಿಸಿದರು. 100 ದಿನ ಅಧಿಕಾರ ಕೊಡಿ ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದರು 8 ವರ್ಷಗಳಾದರೂ ಬೆಲೆಗಳು ಏರಿಕೆಯಾಗಿವೆ 300 ಇದ್ದ ಸಿಲಿಂಡರ್ 1200ಕ್ಕೆ ಏರಿಸಿದ್ದೇ ಮೋದಿ ಸಾಧನೆ, 8 ವರ್ಷದಲ್ಲಿ 1600 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಅವರ ಕೊಟ್ಟ ಮಾತಿನಂತೆ ಅದರೆ ಉದ್ಯೋಗ ಇಲ್ಲವಾಯಿತು, 159 ಆಶ್ವಾಸನೆಗಳನ್ನು ಕೊಟ್ಟ ಸಿದ್ದರಾಮಯ್ಯ ಎಲ್ಲವನ್ನೂ ಈಡೇರಿಸಿದ್ದಾರೆ, ಅದರೆ ಮೋದಿ ಬರೀ ಸುಳ್ಳಿನ ಸರಪಳಿ ಎಣೆದಿದ್ದಾರೆ. ದೇಶವನ್ನು ಸಾಲದ ಶೂಲಕ್ಕೆ ತಳ್ಳಿದ್ದಾರೆ ಎಂದು ಟೀಕಿಸಿದರು.
ಶಾಸಕ ಈ.ತುಕರಾಂ ಮಾತನಾಡಿ ಸಿದ್ದರಾಮಯ್ಯನವರು ಹೇಳಿದ ಹಳೇ ಒಪಿಎಸ್ ಪದ್ದತಿ ಅನುಷ್ಠಾನ, ಎನ್.ಪಿ.ಎಸ್. ರದ್ದತಿ, ಕೃಷಿ ಭಾಗ್ಯ ಯೋಜನೆ, ಕೃಷಿ ಯಂತ್ರೋಪಕರಣ ನೀಡಿಕೆ ಸರ್ವ ಶಿಕ್ಷಣ, ರೈತರ ಸಾಲಾ ಮನ್ನಾ, ವಿದ್ಯಾಸಿರಿ ಯೋಜನೆ, ಕೃಷಿ ಹೊಮಡ ಯೋಜನೆ, ತಂದು ಪ್ರಗತಿಗೆ ನಾಂದಿಹಾಢಿದ್ದು ಕಾಂಗ್ರೇಸ್ ಸರ್ಕಾರ 200 ಯೂನಿಟ್ ವಿದ್ಯುತ್ ವಿತರಣೆ, 2000 ಮನೆಯೊಡತಿಗೆ ನೀಡುವ, 10 ಕೆ.ಜಿ. ಅಕ್ಕಿ ನೀಡುವ ಯೋಜನೆಯನ್ನು ಅನುಷ್ಠಾನ ಮಾಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಏಕಾಂಬ್ರಪ್ಪ, ಚಿತ್ರಿಕಿ ಸತೀಶ್, ಜನಾರ್ಧನ್, ಕೆ.ಸತ್ಯಪ್ಪ, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಈರೇಶ್ ಶಿಂಧೇ, ಇತರರ ಹಲವಾರು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.