ಕಾಂಗ್ರೆಸ್‍ಪಕ್ಷದಿಂದ ಕೋವಿಡ್ ಸಹಾಯ ಕೇಂದ್ರ, ಆರೋಗ್ಯ ತಪಾಸಣೆ

ಚಿಂಚೋಳಿ ಮೇ 1: ತಾಲೂಕಿನ ಕಲ್ಲೂರ್ ರೋಡ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೋವಿಡ್ 19 ಸಹಾಯ ಕೇಂದ್ರ ಆರಂಭಿಸಿ ಗ್ರಾಮದ ಜನರ ಆರೋಗ್ಯ ಬಗ್ಗೆ ತಪಾಸಣೆ ಮಾಡಲಾಯಿತು. ತಪಾಸಣೆ ಕಾರ್ಯಕ್ರಮ ಕುರಿತು ಮಿರಿಯಾಣ ತಾಲೂಕ ಪಂಚಾಯತ ಸದಸ್ಯ ಜಗನ್ನಾಥ ಇದಲಾಯಿ ಮಾತನಾಡಿ ಕೊರೋನ ಬಗ್ಗೆ ಭಯ ಬೇಡ ಆದರೆ ಜಾಗೃತಿಯಿಂದ ನಾವೆಲ್ಲರೂ ಗ್ರಾಮಸ್ಥರು ಇರಬೇಕು.ಗ್ರಾಮದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಜರ್ ಬಳಸಬೇಕು. ಹಾಗೂ ಬಿಜೆಪಿಯ ಪಕ್ಷದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೋವಿಡ್ 19 ಸೋಂಕು ತಡೆಗಟ್ಟಲು ವಿಫಲವಾಗಿದ್ದಾರೆ ಇದರಿಂದ ಭಾರತ ಜನ ಬಹಳಷ್ಟು ಸಂಕಷ್ಟದಲ್ಲಿದ್ದು ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಕಾಂಗ್ರೆಸ್ ಪಕ್ಷದ ವತಿಯಿಂದ ಕೋವಿಡ್ 19 ಸಹಾಯ ಕೇಂದ್ರ ತೆಗೆದಿದ್ದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ರಾಜ್ಯದ ನಾಯಕರಿಗೆ ಮತ್ತು ಚಿಂಚೋಳಿ ತಾಲೂಕಿನ ಮುಖಂಡರಿಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಅವರು ಹೇಳಿದರು. ಈ ಸಂಧರ್ಭದಲ್ಲಿ. ಕಲ್ಲೂರ್ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುದರ್ಶನ ರೆಡ್ಡಿ. ರಾಘವೇಂದ್ರ ಗುತ್ತೇದಾರ. ಮಂಜಲೇ ಸಾಬ್.ನಬಿ ಸಾಬ್. ಸಯ್ಯದ್ ಬಾಬಾ ಹುಸೇನ್. ಶಾಬುದ್ದಿನ್. ಜಗನ್ನಾಥ್ ಗುತ್ತೇದಾರ್. ವಾಜೀದ್. ನಾಗೇಶ್ ಪೂಜಾರಿ. ರವಿ ಪೂಜಾರಿ.ರಾಜು ನಾಟಿಕೆರ್. ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು