ಕಾಂಗ್ರೆಸ್‌ ಪಕ್ಷ ನಾಯಕತ್ವದ ಕೊರತೆಯಿಂದ ಸೊರಗುತ್ತಿದೆ; ಜಗದೀಶ್ ಶೆಟ್ಟರ್


ದಾವಣಗೆರೆ. ನ.೧೮; ರಾಜ್ಯದ 8 ಜಿಲ್ಲೆಗಳಿಂದ ಜನಸ್ವರಾಜ್‌ ಯಾತ್ರೆ ಆರಂಭವಾಗಲಿದೆ ಎಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ನೇತೃತ್ವದಲ್ಲಿ ದಾವಣಗೆರೆಯಿಂದ ಜನಸ್ವರಾಜ್‌ ಯಾತ್ರೆ ನಡೆಯಲಿದೆ.ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತೀಹೆಚ್ಚು ಬಿಜೆಪಿ ಕಾರ್ಯಕರ್ತರು ಆಯ್ಕೆಯಾಗಿದ್ದಾರೆ
ಪ್ರತಿ ಗ್ರಾಮದಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರಿದ್ದಾರೆಕಾಂಗ್ರೆಸ್‌, ಜೆಡಿಎಸ್‌ಗಿಂತ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚು ಆದ್ದರಿಂದ ಪಕ್ಷದ ಸಂಘಟನೆಗೆ ಒತ್ತು ನೀಡುವ ಹಿನ್ನೆಲೆ ಜನಸ್ವರಾಜ್‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ವಿಧಾನ ಪರಿಷತ್‌ ಚುನಾವಣೆಯಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿಲಿದೆ.ಕಾಂಗ್ರೆಸ್‌ ಪಕ್ಷನಾಯಕತ್ವದ ಕೊರತೆಯಿಂದ ಸೊರಗುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಸರ್ಕಾರ ವಿರುದ್ಧ ಪ್ರತಿಭಟಿಸಲು ವಿಪಕ್ಷಗಳಿಗೆ ಯಾವುದೇ ಅಸ್ತ್ರವಿಲ್ಲಅದಕ್ಕಾಗಿ ಬೆಲೆ ಏರಿಕೆಯಂತ ವಿಚಾರಗಳಿಂದ ಪ್ರತಿಭಟಿಸುತ್ತಿದ್ದಾರೆ.ಕಾಲಕ್ಕೆ ತಕ್ಕಂತೆ ಬೆಲೆ ಏರಿಕೆಯಾಗಿದೆ ಎಂದು ಸಮರ್ಥಿಸಿಕೊಂಡರು.
ಜನಸ್ವರಾಜ್ ಯಾತ್ರೆಯ ಈ ತಂಡದಲ್ಲಿ ಸಚಿವರಾದ ಡಾ.ಸುಧಾಕರ್‌, ಬೈರತಿ ಬಸವರಾಜ್‌, ಗೋಪಾಲಯ್ಯ, ಸಂಸದ ಜಿ.ಎಂ. ಸಿದ್ದೇಶ್ವರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಮಹೇಶ್‌ ಟೆಂಗಿನಕಾಯಿ ಇತರರು ಇದ್ದಾರೆ.ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ಕಾರ ಹಿಂದೇಟು ಎಂಬುದುಕ್ಕೆ ಪ್ರತಿಕ್ರಿಯೆ ನೀಡಿದ ಅವರುಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಿಲ್ಲ.ಮೀಸಲಾತಿ ಸೇರಿ ಮೊದಲಾದ ಸಮಸ್ಯೆಗಳಿಂದ ಚುನಾವಣೆ ವಿಳಂಬವಾಗಿದೆ.ಇದರಲ್ಲಿ ಸರ್ಕಾರದ ಪಾತ್ರವೇನು ಇಲ್ಲ.ಯಾವುದೇ ದುರುದ್ದೇಶದಿಂದ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಲ್ಲ.ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಅಲ್ಲ.ಹಾನಗಲ್‌ನಲ್ಲಿ ಸೋತಿದ್ದೇವೆ, ಸಿಂದಗಿಯಲ್ಲಿ ಗೆದ್ದಿದ್ದೇವೆ.ಸಿಂದಗಿಯಲ್ಲಿ ಗೆದ್ದಿದ್ದು ಬಿಜೆಪಿ ಹೆಚ್ಚಿನ ಬಲ ತಂದಿದೆ ಸಿಂದಗಿ ಜೆಡಿಎಸ್ ಕ್ಷೇತ್ರವಾಗಿತ್ತು, ಈಗ ಬಿಜೆಪಿ ಪಾಲಿಗೆ ದಕ್ಕಿದೆ.ಹಾನಗಲ್‌ ಚುನಾವಣೆಯಲ್ಲಿ ಹಿಂದಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ.ಚುನಾವಣೆಯಲ್ಲಿ ಸೋಲು ಗೆಲವು ಸಹಜ.ಮತದಾರರ ಒಲುವು ಬಿಜೆಪಿ ಕಡೆಗೆ ಇದೆಉಪಚುನಾವಣೆಯಲ್ಲಿ ಇದು ಸ್ಪಷ್ಟವಾಗಿದೆ.ಯಾವುದೇ ಉಪಚುನಾವಣೆ, ವಿಧಾನ ಪರಿಷತ್‌ ಚುನಾವಣೆ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ ಎಂದರು. ಬಿಟ್‌ ಕಾಯಿನ್‌ ಬಗ್ಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಅವಧಿಯಲ್ಲಿ ಬಿಟ್‌‌ ಕಾಯಿನ್ ವಿಚಾರದಲ್ಲಿ ಕ್ರಮ ಕೈಗೊಳ್ಳಬಹುದಿತ್ತು ಕಾಂಗ್ರೆಸ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ ಸಿದ್ದರಾಮಯ್ಯನವರು ತಮ್ಮ ಪಕ್ಷದಲ್ಲಿರುವ ವಿರುದ್ಧವೇ ಅಟ್ಯಾಕ್‌ ಮಾಡುತ್ತಿದ್ದಾರೆಬಿಟ್‌ ಕಾಯಿನ್‌ ವಿಚಾರ ಕಾಂಗ್ರೆಸ್‌ ಆಂತರಿಕ ಕಲಹವನ್ನು ಬಿಂಬಿಸುತ್ತಿದೆ.ನಿನ್ನೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಕಾರ್ಯಕರ್ತರು ಡಿಕೆ ಡಿಕೆ ಎಂದು ಕೂಗಿದ್ದು
ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟನ್ನು ಬಹಿರಂಗಗೊಳಿಸಿದೆ ಬಿಟ್‌ ಕಾಯಿನ್‌ ವಿಚಾರ ಕಾಂಗ್ರೆಸ್‌ನವರು ಕಾಂಗ್ರೆಸ್‌ನವರ ವಿರುದ್ಧ ಹೆಣೆದ ತಂತ್ರವಾಗಿದೆ.ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಸರ್ಕಾರ, ತನಿಖೆ ನಡೆಸುತ್ತಿದೆ.ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ಈ ವೇಳೆ ಸಂಸದ ಜಿ.ಎಂ ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ,ಬಿ.ವೈ ವಿಜಯೇಂದ್ರ ಹಾಗೂ ಶಾಸಕರು ಮುಖಂಡರು ಇದ್ದರು.