ಕಾಂಗ್ರೆಸ್‌ ನಲ್ಲಿ ಬಿಕ್ಕಟಿಲ್ಲ; ಸಲ್ಮಾನ್ ಖರ್ಷಿದ್

ನವದೆಹಲಿ, ನ 21-ಕಾಂಗ್ರೆಸ್ ನಲ್ಲಿ ಯಾವುದೇ ಬಿಕ್ಕಟಿಲ್ಲ ಎಂದು ಸ್ಪಷ್ಟಪಡಿಸಿರುವ ಪಕ್ಷದ ಹಿರಿಯ ನಾಯಕ‌ ಸಲ್ಮಾನ್ ಖುರ್ಷೀದ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಎಲ್ಲ ಮುಖಂಡು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ದೆಹಲಿಯಲ್ಲಿ ಹೇಳಿಕೆ ನೀಡಿರುವ ಅವರು, ಪಕ್ಷದ ವಿಚಾರಗಳ ಬಗ್ಗೆ ನಾಯಕರು ತಮ್ಮ ಅಭಿಪ್ರಾಯ ಹೇಳಿಕೆಗಳನ್ನು ಹಂಚಿಕೊಳ್ಳಲು ಪಕ್ಷದ ವೇದಿಕೆಯಲ್ಲಿ ಅವಕಾಶಗಳಿವೆ. ಬಹಿರಂಗವಾಗಿ ಹೇಳಿಕೆ ನೀಡುತ್ತ್ತಿರುವುದಕ್ಕೆ ಬೇಸರ ವ್ಕಕ್ತಪಡಿಸಿದರು.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ಬಗ್ಗೆ ಹಿರಿಯ ನಾಯಕರ ನಡುವೆ ನಡೆದ ವಾಕ್ಸಮರ ತಾರಕ್ಜೇರಿತ್ತು. ಇದರ ಬೆನ್ನಲೇ ಸಲ್ಮಾನ್ ಖುರ್ಷಿ ಅಸಮಾನ‌ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಹಾಗೂ ದಿಗ್ವಿಜಯ ಸಿಂಗ್ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿತ್ತು.