ಕಾಂಗ್ರೆಸ್‍ಸೇರ್ಪಡೆ


ಹುಬ್ಬಳ್ಳಿ,ಏ.1: ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಫೆÇ್ರೀಜ್ ಮಂಚನಕೊಪ್ಪ ಹಾಗೂ ಬಿಜೆಪಿಯಲ್ಲಿದ್ದ ಮೆಹಬೂಬಿ ಬೆಂಗಳೂರಿ ಮತ್ತು ಅವರ ಅಪಾರ ಬೆಂಬಲಿಗರ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಅವರ ಸಮ್ಮುಖದಲ್ಲಿ ನಗರದ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಸಾದ ಅಬ್ಬಯ್ಯ ಮಾತನಾಡಿ, ಜೆಡಿಎಸ್ ಜಾತ್ಯತೀತ ಎಂದು ಹೆಸರಿಟ್ಟುಕೊಂಡಿದ್ದರೂ, ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ತೊರೆದು ಏಕೈಕ ಜಾತ್ಯಾತೀತ ಪಕ್ಷ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಸಂತಸದ ಸಂಗತಿ ಎಂದರು.

ಜೆಡಿಎಸ್ ಪಕ್ಷದ ಶೇ. 50ರಷ್ಟು ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬಂದಿರುವುದು ನಮಗೆ ಮತ್ತಷ್ಟು ಬಲ ತುಂಬಿದೆ. ಪಕ್ಷಕ್ಕೆ ಬಂದಿರುವವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೋಮುವಾದಿ ಪಕ್ಷವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಅಧಿಕಾರ ಪಡೆದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದೆ. ಆ ಪಕ್ಷವನ್ನು ಸೋಲಿಸಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ನಾವು ಚುನಾವಣೆ ಮುಗಿಯುವವರೆಗೆ ಎಡಬಿಡದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಚುನಾವಣೆ ಘೋಷಣೆಯಾಗಿರುವುದರಿಂದ ತೋರಿಕೆಗಾಗಿ ಕೆಲಸ ಮಾಡದೆ, ಪಕ್ಷದ ಗೆಲುವಿಗೆ ದುಡಿಯಿರಿ. ಮುಂದೆ ಅವರವರ ಶ್ರಮಕ್ಕೆ ತಕ್ಕಂತೆ ಮಣೆ ಹಾಕಲಾಗುವುದು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮೇಟಿ ಕಾಂಗ್ರೆಸ್ ಸೇರಿದರು.
ವಿರೋಧಪಕ್ಷ ನಾಯಕಾರಾದ ದೊರೈರಾಜ್ ಮಣಿಕುಂಟ್ಲ, ಪಾಲಿಕೆ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯರಾದ ಇಲಿಯಾಸ್ ಮನಿಯಾರ್, ಮಾಜಿ ಸದಸ್ಯರಾದ ಬಶೀರ್ ಗುಡಮಾಲ್, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಡಿ.ಎಂ. ದೊಡ್ಡಮನಿ, ಶಾರುಖ್ ಮುಲ್ಲಾ, ಇನಾಯತ್ ಖಾನ್ ಪಠಾಣ, ಮದನ ಕುಲಕರ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಮೂದ್ ಕೋಳೂರು, ಪ್ರಸನ್ನಾ ಮಿರಜಕರ, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ಮುಖಂಡರಾದ ವಹಾಬ್ ಮುಲ್ಲಾ, ಕುಮಾರ ಕುಂದನಹಳ್ಳಿ, ಬಾಬಾಜಾನ್ ಕಾರಡಗಿ, ಲತೀಫ್ ಶರಬತವಾಲೆ, ರಾಮಾರಾವ್ ಸೇರಿದಂತೆ ಮೊದಲಾದವರು ಇದ್ದರು.