ಕಾಂಗ್ರೆಸ್ಸಿನಿಂದ ಹಣ, ಹೆಂಡ, ಜಾತಿ ವಿಷ ಬೀಜ ಪ್ರಚಾರ – ಸಿಎಂ ಆರೋಪ

ಉಪ ಚುನಾವಣೆ ನಂತರ ಬಿಜೆಪಿಯ ವಿಜಯೋತ್ಸವ – ಅಭಿವೃದ್ಧಿ ನನ್ನ ಹೊಣೆ
ರಾಯಚೂರು / ಸಿಂಧನೂರು .ಏ.೧೦- ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣ. ಹೆಂಡ, ಜಾತಿ ಬೀಜ ಬಿತ್ತಿ ಮತಯಾಚಿಸುವ ಪ್ರಯತ್ನಿಸುತ್ತಿದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಅವರಿಂದು ಮಸ್ಕಿ ವಿಧಾನಸಭಾ ಕ್ಷೇತ್ರದ ತುರ್ವಿಹಾಳ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಪರ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಯಾವುದೇ ಹೊಡೆಯುವ ರಾಜಕೀಯ ಮಾಡಿದರೂ, ಈ ಕ್ಷೇತ್ರದ ಜನ ಪ್ರತಾಪಗೌಡ ಪಾಟೀಲ್ ಅವರ ಪರ ಮತ ಚಲಾಯಿಸಲಿದ್ದಾರೆ. ಪ್ರತಾಪಗೌಡ ಪಾಟೀಲ್ ಅವರು ೨೫ ಸಾವಿರ ಮತಗಳ ಅಂತರದಿಂದ ಜಯಗಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿಳಾಸವಿಲ್ಲದಂತೆ ಹೀನಾಯ ಸೋಲು ಅನುಭವಿಸಲಿದೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಫಲಿತಾಂಶದ ನಂತರ ಬಿಜೆಪಿ ಶಕ್ತಿ ಮತ್ತೊಮ್ಮೆ ಸ್ಪಷ್ಟಗೊಳ್ಳಲಿದೆ. ಯಡಿಯೂರಪ್ಪ ಎಂದೂ ಕೂಡ ಜವಾಬ್ದಾರಿ ಬಿಟ್ಟು ಮಾತನಾಡುವುದಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಿರುವ ಸತ್ಯ. ಉಪ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷವನ್ನು ಹೇಳ ಹೆಸರಿಲ್ಲದಂತೆ ಮಾಡಲಿದೆ. ಕಾಂಗ್ರೆಸ್ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕಾರಣ ಫಲಿತಾಂಶ ಬಂದ ನಂತರ ನಾನೇನ್ನುವುದು ಸ್ಪಷ್ಟ ಪಡಿಸುತ್ತದೆ.
ಪ್ರತಾಪಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಾನು ಸಿಎಂ ಆಗಲು ಸಾಧ್ಯವಾಗಿದೆ. ಚುನಾವಣೆ ನಂತರ ಮತ್ತೇ ನಾನು ಈ ಕ್ಷೇತ್ರಕ್ಕೆ ಬರುತ್ತೇನೆ. ಎಲ್ಲರೂ ಸೇರಿ ವಿಜಯೋತ್ಸವ ಆಚರಿಸೋಣಾವೆಂದ ಅವರು, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಹೊಣೆ. ಹೆಣ್ಣು ಮಕ್ಕಳಿಗೆ ಬಾಗ್ಯಲಕ್ಷ್ಮೀ ಯೋಜನೆ, ಕಿಸಾನ್ ಯೋಜನೆಯಿಂದ ರೈತರ ಖಾತೆಗೆ ಹಣ, ಕಾಂಗ್ರೆಸ್ ಗುಂಡಾಗಿರಿಗೆ ಹೆದರದೆ ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಪಾಟೀಲ ರು ೨೫ ಸಾವಿರ ಮತಗಳಿಂದ ಗೆಲ್ಲಿಸಿಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಬೇಸಿಗೆ ಬೆಳೆ ಭತ್ತ ಹಾಗೂ ಜೋಳ ಖರೀದಿಗೆ ಸರ್ಕಾರ ನಿರ್ಧರಿಸಿದೆ.ತುರವಿಹಾಳ ಗ್ರಾಮದಲ್ಲಿ ಸಮುದಾಯ ಕೇಂದ್ರ ಹಾಗೂ ಕೈಗಾರಿಕೆ ಆರಂಭಿಸಲು ಮುಂದಿನ ದಿನಗಳಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೆನೆ ಕಲ್ಯಾಣ ಕರ್ನಾಟಕಕ್ಕೆ ಒಂದುವರೆ ಸಾವಿರ ಕೋಟಿ ಹಣ ತೆಗದು ಇಟ್ಟಿದ್ದೆನೆ.ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ,ಬಂಜಾರ ಅಭಿವೃದ್ಧಿ ಮಂಡಳಿ ಮಾಡುತ್ತೆನೆ ನವಲಿ ಸಮಾನಾಂತರ ಜಲಾಶಯ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಹಣ ಇಟ್ಟಿದ್ದೆನೆ. ವಾಲ್ಮೀಕಿ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಮಠ ,ಮಾನ್ಯಗಳನ್ನು ಆಧುನಿಕರಣ ಮಾಡುತ್ತೆನೆಂದರು.
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಪಾಟೀಲ ೨೫ ಸಾವಿರ ಮತಗಳಿಂದ ಗೆಲ್ಲುತ್ತಾರೆ ಮುಂದಿನ ದಿನಗಳಲ್ಲಿ ಮಸ್ಕಿ ಕ್ಷೇತ್ರ ನಾನು ವಿಶೇಷ ಕಾಳಜಿ ಹಾಗೂ ಅನುದಾನ ಕೊಡುತ್ತೆನೆ ಪ್ರತಾಪ್ ಪಾಟೀಲ ರಾಜಿನಾಮೆಯಿಂದ ನಾನು ಮುಖ್ಯಮಂತ್ರಿ ಮಸ್ಕಿ ಸೇರಿದಂತೆ ಬಸವಕಲ್ಯಾಣ ,ಬೆಳಗಾವಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಕಾಂಗ್ರೆಸ್ ದೂಳಿಪಟವಾಗುತ್ತದೆ. ಕಾಂಗ್ರೆಸ್ ಅಪ ಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಪಾಟೀಲ ರನ್ನು ಗೆಲ್ಲಿಸಿದರೆ ಅವರು ಸಚಿವರಾಗಿ ಕ್ಷೇತ್ರ ಅಭಿವೃದ್ಧಿ ಯಾಗುತ್ತದೆಂದು ಸಮಾಜ ಕಲ್ಯಾಣ ಸಚಿವರಾದ ಶ್ರೀ ರಾಮುಲು ಮಾತನಾಡಿದರು.
ಅಭ್ಯರ್ಥಿ ಪ್ರತಾಪ್ ಪಾಟೀಲ, ಸಚಿವರಾದ ಮುರಗೇಶ ನಿರಾಣಿ ,ಬೈರತಿ ಬಸವರಾಜ, ಎಸ್.ಟಿ ಸೋಮಶೇಖರ್ ,ಆನಂದ ಸಿಂಗ್ ಶಿವಾರಮ್ ಹೆಬ್ಬಾರ್ ,ಬಿಸಿ ಪಾಟೀಲ, ಸಂಸದರಾದ ಸಂಗಣ್ಣ ಕರಡಿ ,ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ , ಶಾಸಕರಾದ ರಾಜುಗೌಡ ,ಬಸವರಾಜ ದಡೆಸ್ಗೂರು, ರೇಣುಕಾಚಾರ್ಯ, ಬಸವರಾಜ ಮಾಯಗೊಂಡ , ಎ.ಎಸ್.ಪಾಟೀಲ ನಡಹಳ್ಳಿ ,ಮುನಿರತ್ನ ,ಪ್ರಿತಂ ಗೌಡ ,ವಿಶ್ವ ನಾಥ ಗೌಡ ,ಹನುಮನಗೌಡ ಬೆಳಗುರ್ಕಿ ,ಕೆ.ಶಿವರಾಂ ,ಆದಿಮನಿ ವೀರಲಕ್ಷ್ಮೀ ,ಪರಣ್ಣ ಮನವಳ್ಳಿ ಸೇರಿದಂತೆ ಶಾಸಕ ,ಸಂಸದರು ಪಕ್ಷದ ಮುಖಂಡರು ಹಾಜರಿದ್ದರು.