ಕಾಂಗ್ರೆಸ್‌ನಿಂದ ಮಾತ್ರ ಜನಸಾಮಾನ್ಯರ ರಕ್ಷಣೆ- ಡಾ. ನಾಗವೇಣಿ

ರಾಯಚೂರು,ಮಾ.೧೯- ಈ ನಾಡಿನಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಮುದಾಯಗಳು ಸುಂದರ ಬದುಕು ಕಟ್ಟಿಕೊಂಡು ಸ್ವಾತ ಬದುಕು ನಡೆಸುವಂತೆ ರಕ್ಷಣೆ ನೀಡುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ ಎಂದು ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ಹೇಳಿದರು.
ಅವರು ಮಸ್ಕಿ ತಾಲೂಕಿನ ಮಲದ ಗುಡ್ಡ, ಹರಳಳ್ಳಿ, ಏಳು ಮೈಲು ಕ್ಯಾಂಪು, ಮತ್ತು ಗುಂಜಳ್ಳಿ ಇನ್ನು ಇತರ ಗ್ರಾಮಗಳಿಗೆ ತೆರಳಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ಮನೆಮನೆಗೆ ವಿತರಿಸಿ ನಂತರ ಮಾತನಾಡುತ್ತಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ೨೦೦ ವಿದ್ಯುತ್ ಯೂನಿಟ್ ಉಚಿತ, ಪ್ರತಿ ಕುಟುಂಬದ ಯಜಮಾನಳಿಗೆ ೨೦೦೦ ಸಾವಿರ ರೂಪಾಯಿಗಳು ಪಡಿತರ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ ೧೦ ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. ಈ ಚುನಾವಣೆಯಲ್ಲಿ ನೀವುಗಳು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಯೋಜನೆಗಳು ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಡಾ. ನಾಗವೇಣಿ ಅವರು ಮನವಿ ಮಾಡಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಮುಖ ಪದಾಧಿಕಾರಿಗಳಾದ. ಮಸ್ಕಿ ತಾಲೂಕ್ ಅಧ್ಯಕ್ಷ ಬೇಗಂ ಹವಲ್ದಾರ್, ಜಿಲ್ಲಾ ಕಾರ್ಯದರ್ಶಿಯಾದ ಶ್ರುತಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿಯಾದ ಗದ್ಯಮ್ಮ ಮತ್ತು ಮಲ್ಲಮ್ಮ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಊರಿನ ಮುಖಂಡರು ಸೇರಿದಂತೆ ಇನ್ನೂ ಇತರರು ಭಾಗವಹಿಸಿ ಕಾರ್ಡ್‌ಗಳನ್ನು ವಿತರಿಸಿದರು.