ಕಾಂಗ್ರೆಸ್‍ನಿಂದ ತಾಲಿಬಾನ್ ಸರ್ಕಾರ: ಸಂಸದ ಪ್ರತಾಪ್ ಸಿಂಹ

ಮೈಸೂರು: ಮೇ.04:- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರ್ಕಾರ ರಚನೆ ಆಗಲ್ಲ ಬದಲಾಗಿ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಪುನರ್ ಉಚ್ಚರಿಸಿದರು.
ಭಜರಂಗದಳ ನಿಷೇದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್, ಹನುಮಂತನ ಜನ್ಮದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯರಿಂದ ಏನೂ ನಿರೀಕ್ಷೆ ಸಾಧ್ಯ? ಬಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಕಿಡಿಕಾರಿದರು.
ಘಜ್ನಿ ಮಹಮ್ಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಸೀತೆ ಹುಡುಕಿಕೊಂಡು ಹೋದ ಬಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದ. ಕರ್ನಾಟಕದ ಬಜರಂಗಿಗಳು ಹಿಂದುತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ಅನ್ನು ಹೊಸಗಿ ಹಾಕುತ್ತಾರೆ. ರಾಮನ ಮೇಲೆ ಹನುಮಂತ ಮೇಲೆ ಯಾಕೆ ಕಾಂಗ್ರೆಸಿಗರಿಗಿಷ್ಟು ಕೋಪ? ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರ್ಕಾರ ರಚನೆ ಆಗಲ್ಲ ಬದಲಾಗಿ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಅಕ್ರಮವಾಗಿ ಮುಸ್ಲಿಮರಿಗೆ ಕರ್ನಾಟಕದಲ್ಲಿ ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನು ನಾವು ತೆಗೆದಿದ್ದೇವೆ. ಕಾಂಗ್ರೆಸ್ಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು. ನಾವು ನ್ಯಾಯ ನೀಡಿದ್ದೇವೆ. ಬಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ. ಯಾರನ್ನು ಕೊಲೆ ಮಾಡಿದ್ದಾರೆ. ಅಶಾಂತಿ ಕದಡುವ ಕೆಲಸ ಏನೂ ಮಾಡಿದ್ದಾರೆ? ಪಿಎಫ್‍ಐ, ಕೆಎಫ್‍ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆ ಎಂದು ಪ್ರಶ್ನಿಸಿದರು.
ಬಜರಂಗದಳದವರು ಗೋಮಾತೆ, ಹಿಂದುತ್ವದ ರಕ್ಷಣೆಗೆ ಕರ್ನಾಟಕದ ಹಿತ ರಕ್ಷಣೆಗೆ ಬಜರಂಗದಳ ಹೋರಾಟ ಮಾಡಿದ್ದಾರೆ. ತಾಲಿಬಾನ್ ಸರ್ಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದುಗಳಿಗೆ, ಹಿಂದೂತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲ ಎಂದರು.