ಲಕ್ಷ್ಮೇಶ್ವರ:-ರಾಜ್ಯದ ಮತದಾರರಿಗೆ ಸುಳ್ಳು ಗ್ಯಾರಂಟಿ ನೀಡಿ ಮೋಸದ ಮುಖಾಂತರ ಅಧಿಕಾರಿಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಈಗ ಐದು ಗ್ಯಾರಂಟಿಗಳ ಬಗ್ಗೆ ಉಲ್ಟಾ ಹೊಡೆಯುತ್ತಿದ್ದು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿ ಈಗ ಡಬಲ್ ಗೇಮ್ ಆಡುತ್ತಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರು ಹೇಳಿದ್ದಾರೆ.
ಅವರು ರಾಜ್ಯದಲ್ಲಿನ ಮತದಾರರನ್ನು ದಾರಿ ತಪ್ಪಿಸಿ ಅಧಿಕಾರ ಪಡೆದುಕೊಂಡು ಈಗ ಗ್ಯಾರಂಟಿಗಳ ಜಾರಿಗೆ ಸಮಿತಿ ರಚನೆ ಮಾರ್ಗಸೂಚಿ ಮತ್ತಿತರ ನೆಪಗಳನ್ನು ನೀಡುತ್ತಿದ್ದು ಇದು ಮತದಾರರಿಗೆ ಬಗೆದ ದ್ರೋಹವಾಗಿದೆ. ಸಾಲದ್ದಕ್ಕೆ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಾ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಹೊರಟಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯಲು ರಾಜ್ಯದಲ್ಲಿ ಆರ್ ಎಸ್ ಎಸ್ , ಬಜರಂಗದಳ ನಿಷೇಧಿಸುವ ಮಾತುಗಳ ನಾಡಿ ಭಸ್ಮಾಸುರಾಗಲು ಹೊರಟಿದ್ದಾರೆ.
ಓಲೈಕೆ ರಾಜಕಾರಣ ಬಿಟ್ಟು ಮತದಾರರ ನಂಬಿಕೆಗೆ ದ್ರೋಹ ಮಾಡದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಇಲ್ಲದಿದ್ದರೆ ಮತದಾರರೇ ಮುಂಬರುವ ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರಿಗೆ ಮಂಗಳಾರತಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.