ಕಾಂಗ್ರೆಸ್‌ನಲ್ಲಿ ಮಾತ್ರ ತಳ ಸಮುದಾಯವರಿಗೂ ಉತ್ತಮ ಸ್ಥಾನಮಾನ ನೀಡಲು ಸಾಧ್ಯ

ಹೊನ್ನಾಳಿ.ಜು.೧೧; ಉಪಸಭಾಪತಿ ಸ್ಥಾನ ಒಲ್ಲೆ ಸಾರ್, ನಾನು ನಿಮ್ಮ ಬಳಿ ಮಾತನಾಡುತ್ತೇನೆ ಎಂದಿದ್ದೆ,ಆದರೆ ಪಕ್ಷದ ತೀರ್ಮಾನಕ್ಕಾ ತಲೆಬಾಗಿ ನಾನು ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡೆ ಎಂದು ನೂತನ ಉಪಸಭಾಪತಿ ರುದ್ರಪ್ಪಲಮಾಣಿ ಹೇಳಿದರು.ನಗರದ ಗುರುಭವನದಲ್ಲಿ ಅವಳಿ ತಾಲೂಕಿನ ಬಂಜಾರ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನಗೆ ಕರೆ ಮಾಡಿ ಉಪಸಭಾಪತಿ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು ನಾನು ಒಲ್ಲೆ ಎಂದು ಹೇಳಿದ್ದೆ, ಅಲ್ಲದೆ ಕರ್ನಾಟಕದ ಉಸ್ತುವಾರಿ ಸುರ್ಜೆವಾಲ ನಾಲ್ಕು ಬಾರಿ ದೂರವಾಣಿ ಕರೆ ಮಾಡಿ ಉಪಸಭಾಪತಿ ಸ್ಥಾನ ತೆಗೆದುಕೊಳ್ಳಿ ರಾಹುಲ್‌ ಗಾಂಧಿ ಹಾಗೂ ಖರ್ಗೆಯವರು ಹೇಳಿದ್ದಾರೆ ಎಂದು ಹೇಳಿದಾಗ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ನಾನು ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡೆ, ಇದಕ್ಕೂ ಮೊದಲು ಸಿಎಂ.ಅವರು ಲೋಕಸಭೆ ಚುನಾವಣೆ ನಂತರ ನಿನಗೆ ಉತ್ತಮ ಸ್ಥಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದರು ಆದರೆ ದಿಢೀರ್ ಎಂದು ಉಪಸಭಾಪತಿ ಸ್ಥಾನ ನೀಡಿದರು ಎಂದು ವಿವರಿಸಿದರು.ತಾಂಡ,ಹಟ್ಟಿ,ಆಡಿಗೆ ಕಂದಾಯ ಗ್ರಾಮಗಳನ್ನು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಆದರೆ ಸರ್ಟಿಪಿಕೇಟ್ ಕೊಟ್ಟಿದ್ದು ಮೋದಿ ಅವರು, ನಮ್ಮ ಹೆಸರಲ್ಲಿ ಅವರು ಕೊಡುವ ಅಗತ್ಯತೆ ಇತ್ತೇ ಎಂದು ಪ್ರಶ್ನಿಸಿದ ಅವರು, ನನ್ನ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದರೂ ನಾನು ಗೆದ್ದು ಬಂದೆ, ಜನ ತೀರ್ಮಾನಿಸಿದರೆ ಎಂತಹ ವ್ಯಕ್ತಿ ಬಂದರೂ ನಮ್ಮನ್ನು ಉಪ್ಪರಿಗೆಯಲ್ಲಿ ಕೂರಿಸುತ್ತಾರೆ ಎನ್ನುವುದಕ್ಕೆ ನಾನು ಉದಾಹರಣೆ, ಕಾಂಗ್ರೆಸ್‌ನಲ್ಲಿ ಮಾತ್ರ ತಳ ಸಮುದಾಯವರಿಗೂ ಉತ್ತಮ ಸ್ಥಾನಮಾನ ಸಿಗುತ್ತದೆ ಆದರೆ ತಾಳ್ಮೆಯಿಂದ ಇರಬೇಕು ಎಂದರು.ನಮ್ಮ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನೂ ಪೂರೈಸುತ್ತದೆ,ಇದಕ್ಕೆ ಯಾರೂ ಅನುಮಾನ ಪಡುವುದು ಬೇಡ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿಗೆ ಶಾಸಕರು ಶ್ರಮವಹಿಸಿ ಕೆಲಸ ಮಾಡುತ್ತಾರೆ,ಅವರ ಜೊತೆಯಲ್ಲಿ ನಾನೂ ಇರುತ್ತೇನೆ ಎಂದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ,ಸಂತಸೇವಾಲಾಲರ ಪ್ರತಿರೂಪವೇ ನೂತನ ಉಪಸಭಾಪತಿ ರುದ್ರಪ್ಪ ಲಮಾಣಿ ಎಂದರೆ ತಪ್ಪಾಗಲಾರದು, ಏಕೆಂದರೆ ಅಂತಹ ವ್ಯಕ್ತಿತ್ವ,ಸರಳ ಹಾಗೂ ಸಜ್ಜನಿಕೆ ಎಂದು ಹೇಳಿದರು, ಅವರಲ್ಲಿ ಒಮ್ಮೆಯೇ ಕೋಪ ಮಾಡಿಕೊಂಡ ಮುಖವನ್ನು ನಾನು ಮುವತ್ತು ವರ್ಷದಲ್ಲಿ ನೋಡೇ ಇಲ್ಲ,ಅಂತಹ ಪ್ರಸನ್ನತೆ ಇರುವ ವ್ಯಕ್ತಿತ್ವ ಅವರದು ಎಂದರು.ಒಡ ಹುಟ್ಟಿದ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯವನ್ನು ನಾನು ನೋಡಿದ್ದೇನೆ ಆದರೆ ನಾವಿಬ್ಬರಲ್ಲಿ ಕಳೆದ ಮುವತ್ತು ವರ್ಷದಲ್ಲಿ ಒಮ್ಮೆಯೂ ಬಿನ್ನಾಭಿಪ್ರಾಯ ಬಂದಿಲ್ಲ ಒಂದೇ ತಾಯಿ ಮಕ್ಕಳ ಹಾಗೇ ಇದ್ದಿವಿ ಎಂದರು.ಇAತಹ ವ್ಯಕ್ತಿಗೆ ಮಂತ್ರಿ ಸ್ಥಾನ ಇಗದೆ ಇದ್ದರೂ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಮಂತ್ರಿಗಳನ್ನು ತನ್ನ ಕಚೇರಿಗೆ ಕರೆಸಿಕೊಳ್ಳುವ ಸ್ಥಾನ ಪಡೆದಿದ್ದಾರೆ,ಅದಕ್ಕೆ ದೇವರು ಸ್ಥಾನ ಕೊಡುವುದರಲ್ಲೂ ಅಳೆದು ತೂಗಿ ಕೊಡುತತಾರೆ ಎನ್ನುವುದಕ್ಕೆ ರುದ್ರಪ್ಪ ಲಮಾಣಿ ಒಬ್ಬರು,ಅವರಿಗೆ ಸೇವಾಲಾಲರೇ ಅಂತಹ ಉನ್ನತ ಸ್ಥಾನವನ್ನು ಕರುಣಿಸಿದ್ದಾರೆ ಎಂದರು.ಚುನಾವಣೆ ಸಮಯದಲ್ಲಿ ಕೆಲ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ, ಆ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ಯಾಬಿನಟ್ ಗೆ ತರಲು ಮನವಿ ಮಾಡುತ್ತೇನೆ, ಸಮುದಾಯ ಭವನಕ್ಕೆ ಬೇಕಾದ ಸ್ಥಳದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು.ಇದೇ ವೇಳೆ ಉಪಸಭಾಪತಿ ಹಾಗೂ ನೂತನ ಶಾಸಕರಿಗೆ ಬಂಜಾರ ಸಮುದಾಯದಿಂದ ಸನ್ಮಾನ ಮಾಡಿದರು.ಬಂಜಾರ ಸಮುದಾಯದ ಮುಖಂಡ ಜಯದೇವನಾಯ್ಕ್ ಮಾತನಾಡಿ, ಬಂಜಾರ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಕೆಪಿಎಸ್ಸಿ ಸದಸ್ಯ ಸ್ಥಾನ ಸಿಗಲಿದೆ.ಅಲ್ಲದೆ ನಮ್ಮ ಸಮುದಾಯದ ಮತಗಳಿಂದ ರಾಜ್ಯದಲ್ಲಿ 45 ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ,ಡಾ,ಈಶ್ವರ್‌ನಾಯ್ಕ್, ಬಿ.ಸಿದ್ದಪ್ಪ ಮಾತನಾಡಿದರು. ರಾಘವೇಂದ್ರನಾಯ್ಕ್, ಉಮಾಪತಿ, ಎಚ್.ಬಿ.ಶಿವಯೋಗಿ, ಆರ್,ನಾಗಪ್ಪ,ನುಚ್ಚಿನ ವಾಗೀಶ್,ಕುಬೇರನಾಯ್ಕ್,ಅಂಜುನಾಯ್ಕ್,ಸೂರ್ಯನಾಯ್ಕ್ ಹಾಗೂ ಇತರರು ಇದ್ದರು.