ಕಾಂಗ್ರೆಸ್‍ನಲ್ಲಿ ಮತ ನೀಡುವಂತೆ ಪ್ರಗತಿಪರರ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು.ಏ.07:- ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಾತು ತಪ್ಪಿದ ಬಿಜೆಪಿಗೆ ಮತ ಹಾಕುವ ಬದಲು ಎಲ್ಲರ ಹಿತರಕ್ಷಣೆ ಮಾಡುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮಾಜಿ ಮೇಯರ್ ಪುರುಷೋತ್ತಮ್, ಪ್ರಗತಿಪರ ಚಿಂತಕ ಪೆÇ್ರ.ಕೆ.ಎಸ್.ಭಗವಾನ್, ಪೆÇ್ರ.ಮಹೇಶ್ಚಂದ್ರಗುರು ಮತದಾರರಲ್ಲಿ ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಹಿಷ ದಸರಾ ಆಚರಣಾ ಸಮಿತಿವತಿಯಿಂದ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೊದಲಿಗೆ ಪುರುಷೋತ್ತಮ್ ಮಾತನಾಡಿ, ದಲಿತ ಸಮುದಾಯಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಚುನಾವಣೆ ವೇಳೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಸಂವಿಧಾನ ಜಾರಿಯಾಗಿ ಆಡಳಿತ ಆರಂಭವಾದ ಬಳಿಕ ಇಡೀ ದೇಶವನ್ನು ನಿರುದ್ಯೋಗ, ಭ್ರಷ್ಟಾಚಾರ, ಬಡತನಕ್ಕೆ ತಳ್ಳಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಹೀಗಾಗಿ ಯುವಜನತೆ ಎಚ್ಚರಿಕೆಯಿಂದ ಮತ ನೀಡಬೇಕೆಂದು ಕೋರಿದರು.
ಬಳಿಕ, ಪೆÇ್ರ.ಕೆ.ಎಸ್. ಭಗವಾನ್ ಮಾತನಾಡಿ, ದೇಶದಲ್ಲಿ ದಲಿತರು, ಹಿಂದುಳಿದವರು, ಬಡಜನತೆ ಸಂಕಷ್ಟದಲ್ಲಿದ್ದಾರೆ. ಇವರ ಜೀವನ ಸುಧಾರಣೆ ಆಗಬೇಕೆಂದರೆ ಕಾಂಗ್ರೆಸ್‍ಗೆ ಮತ ನೀಡಬೇಕಾದ ಅಗತ್ಯವಿದೆ. ಕಾಂಗ್ರೆಸ್ ಗ್ಯಾರೆಂಟಿಯಿಂದ ಎಷ್ಟೋ ಬಡಜನರಿಗೆ ಅನುಕೂಲವಾಗಿದೆ. ಹೀಗಾಗಿ ಇಡೀ ದೇಶಾದ್ಯಂತ ಇದೇ ರೀತಿಯ ಗ್ಯಾರೆಂಟಿ ಜಾರಿಗೊಳಿಸಲು ಹೊರಟಿರುವುದು ಸ್ವಾಗತಾರ್ಹವೆಂದರು.
ಪೆÇ್ರ. ಮಹೇಶ್ಚಂದ್ರಗುರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವರ್ಣರಂಜಿತರಾಗಿರಬಹುದು, ಆದರೆ ಅವರ ಆಡಳಿತದಲ್ಲಿ ದೇಶದ ಜನತೆ ಸುಖದಿಂದ ಇದ್ದಾರೆಯೇ ಎಂಬುದು ಮುಖ್ಯವಾಗಿದೆ. ನಮಗೆ ಗಾಂಧಿಯಂತಹ ಸೇವಾಲಾಲ್ ಬೇಕೇ ಹೊರತು ಮೋದಿಯಂತಹ ಶೋಕೀ ಲಾಲ್ ಅಲ್ಲ. ಭಾರತ ಈಗ ಪ್ರಕಾಶಿಸುತ್ತಿಲ್ಲ, ಬದಲಾಗಿ ನಲುಗುತ್ತಿದೆ. ಹೀಗಾಗಿ ಕಾಂಗ್ರೆಸ್‍ಗೆ ಜನತೆ ಮತ ನೀಡಬೇಕಾದ ಅಗತ್ಯವಿದೆ ಎಂದರು. ಸಿದ್ದಸ್ವಾಮಿ, ಚಿಕ್ಕಂದಾನಿ ಇದ್ದರು.