ಕಾಂಗ್ರೆಸ್‍ನದು ಕೀಳುಮಟ್ಟದ ರಾಜಕಾರಣ

ಹುಬ್ಬಳ್ಳಿ, ಏ 16: ಮಾಜಿ ಪ್ರಧಾನಿ ದೇವೆಗೌಡ ಅವರು ಕರ್ನಾಟಕದ ಏಕಮೇವ ಪ್ರಧಾನಿ. ಅವರಿಗೆ ಗೌರವ ಕೊಡುವುದು ನಮ್ಮ ಸಂಸ್ಕ್ರತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಅವರ ಸ್ಥಾನ ಭದ್ರವಾಗುತ್ತದೆ ಎಂದುಕೊಂಡಿದ್ದರು. ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿರುವ ಕಾರಣಕ್ಕೆ ತಳಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ನುಡಿದರು.

ದೇವೆಗೌಡರು ಮಾಜಿ ಪ್ರಧಾನಿ, ಅವರ ಮಾತಿಗೆ ಗೌರವ ಕೊಡುವುದು ನಮ್ಮ ಸಂಸೃತಿ. ನಿಮ್ಮ ಹೇಳಿಕೆ ನಿಮ್ಮ ನಿಲುವು ಏನೇ ಇರಲಿ. ಅವರ ಸಭೆಯಲ್ಲಿ ಧಿಕ್ಕಾರ ಕೂಗುವುದು ಸರಿ ಅಲ್ಲ. ಇದು ಖಂಡನೀಯ ಎಂದು ಬೊಮ್ಮಾಯಿ ಹೇಳಿದರು.