ಕಾಂಗ್ರೆಸ್‌ಗೆ ಬೆಂಬಲ:ರಾಜ್ಯ ಸಮಿತಿ ನಿರ್ಧಾರ

ಬಂಗಾರಪೇಟೆ, ಏ.೨೭- ರಾಜ್ಯದಲ್ಲಿ ೨೦೨೩ರ ಸಾರ್ವಂತ್ರಿಕ ವಿಧಾನಸಭಾ ಚುನಾವಣೆಯ ಬೆಂಬಲವಾಗಿ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಜಿಲ್ಲೆಯ ಆರು ತಾಲ್ಲೂಕಿನ ದಸಂಸ ಕರ್ನಾಟಕದ ಜಿಲ್ಲಾ ಘಟಕ ತಾಲ್ಲೂಕು ಘಟಕ, ಹೋಬಳಿ ಘಟಕ, ಗ್ರಾಮ ಘಟಕಗಳು ರಾಜ್ಯ ಸಮಿತಿಯ ಸಂಚಾಲಕ ಅಣ್ಯಯ್ಯ ಆದೇಶದಂತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಜಿಲ್ಲಾ ಸಮಿತಿಗೆ ಆದೇಶವನ್ನು ನೀಡಿದ್ದು, ಅದರಂತೆ ೬ತಾಲ್ಲೂಕಿನ ತಾಲ್ಲೂಕಿನ ಅಧ್ಯಕ್ಷರು ಕಾಂಗ್ರೆಸ್‌ಗೆ ಬೆಂಬಲ ನೀಡಲು ದಸಂಸ-ಕರ್ನಾಟಕ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕ ಗುಲ್ಲಹಳ್ಳಿ ಬಸಪ್ಪ ಹಾಗೂ ಕಲಾಮಂಡಳಿ ಅಧ್ಯಕ್ಷ ಹಿರೇಕರಪನಹಳ್ಳಿ ಕಲಾವಿದ ವಿ.ಯಲ್ಲಪ್ಪ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಸಭೆ ಸೇರಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ದಲಿತ ಸಂಘಟನೆಗಳೊಡನೆ ರಾಜ್ಯಮಟ್ಟದಲ್ಲಿ ಸಭೆಯನ್ನು ಕರೆದು ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿಯ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣಕ್ಕಾಗಿ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ, ಅವರ ಪರವಾಗಿ ಕೆಲಸ ಮಾಡಲು ನಿರ್ಧರಿಸಿ, ಜಾತಿವಾದಿ ಮತ್ತು ಪಕ್ಷಗಳನ್ನು ಅಧಿಕಾರದಿಂದ ದೂರ ಇಡಲು ಕಂಕಣ ಬದ್ದವಾಗಿದೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಶೋದನಾ ವಿದ್ಯಾರ್ಥಿ ಚಂದ್ರು ಪೆರಿಯಾರ್ ಅವರನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದನ್ನು ಸಮಿತಿಯು ತುಂಬು ಹೃದಯದಿಂದ ಸ್ವಾಗತಿಸುತ್ತಿದೆ. ಚಂದ್ರು ಪೆರಿಯಾರ್‌ರೊಂದಿಗೆ ದಲಿತ ವಿದ್ಯಾರ್ಥಿ ಒಕ್ಕೂಟ, ರಾಜ್ಯಾದಂತ್ಯ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಕಾರ್ಯಕ್ರಮಗಳನ್ನು ರೂಪಿಸಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದೆ. ಅದರಂತೆ ಪ್ರಾಮಾಣಿಕವಾಗಿ ರಾಜ್ಯ ಸಮಿತಿ ಆದೇಶವನ್ನು ಪರಿಪಾಲಿಸುವಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸಂಪೂರ್ಣ ಬೆಂಬೆಲ ನೀಡುವುದಾಗಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿರೇಕರಪನಹಳ್ಳಿ ರಾಮಪ್ಪ, ಬೆಂಗಳೂರು ಮಹಿಳಾ ವಿಭಾಗೀಯ ಸಂಚಾಲಕಿ ಚಿಕ್ಕವಲಗಮಾದಿ ಲಕ್ಷ?ಮಮ್ಮ, ರಾಧಾಕೃಷ್ಣ, ಬಡಮಾಕನಹಳ್ಳಿ ವೆಂಕಟೇಶ್, ದೊಡ್ಡಮಲ್ಲೆ ರವಿ, ಸಿದ್ದನಹಳ್ಳಿ ಯಲ್ಲಪ್ಪ, ಇತರರು ಉಪಸ್ಥಿತರಿದ್ದರು.