
ಹೊಸಕೋಟೆ,ಸೆ.೪-ತಾಲೂಕಿನ ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಪಕ್ಷಕ್ಕೆ ಧಕ್ಕಿದ್ದು ಬಿಜೆಪಿ ಶೂನ್ಯ ಸ್ಥಾನದೊಂಧಿಗೆ ಡೈರಿಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.
ಒಟ್ಟು ೧೧ ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ೧೧ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಹುಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಚುನವಣೆಯಲ್ಲಿ ೧೧ ಬಿಜೆಪಿ ಬೆಂಬಲಿತ ಹಾಗೂ ೧೧ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿದರು. ಚುನಾವಣೆ ನಡೆದ ಸಂದರ್ಭದಲ್ಲಿ ೧೧ ಕ್ಕೆ ೧೧ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೆ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಉಳಿದಂತೆ ಬಿಜೆಪಿ ಬೆಂಬಲಿತರು ಒಂದೂ ಸ್ಥಾನವನ್ನು ಗೆಲ್ಲಲಾಗದೆ ಶೂನ್ಯ ಸಾಧನೆ ಮಾಡುವಂತಾಯಿತು.
ನೂತನ ನಿರ್ದೇಶಕರಾಗಿ ಸಿ.ಚಂದ್ರೇಗೌಡ(೮೭), ಬಿ.ಚಂದ್ರಶೇಖರ್(೮೩), ಹೆಚ್.ಜೆ.ಬಚ್ಚೇಗೌಡ(೮೧). ಅಲಿಂಪಾಷ(೭೮), ಎಂ.ಮಂಜುನಾಥ್(೭೨), ಫರಿಧಾ(೬೩), ಪಿ.ನಾರಾಯಣಸ್ವಾಮಿ(೭೮), ಸೋಮಶೇಖರ್(೭೭), ಜಯಲಕ್ಷ್ಮಮ್ಮ(೮೬) ಚಿಕ್ಕಕ್ಕಮ್ಮ(೮೫) ಮತಗಳನ್ನು ಪಡೆದು ಆಯ್ಕೆಯಾದರು.
ಈ ಸಂಧರ್ಭದಲ್ಲಿ ಮುಖಂಡರಾದ ವಸಂತ್ ಕುಮಾರ್, ಸಯ್ಯದ್ ಶಫಿವುಲ್ಲಾ, ರಮೇಶ್, ಮುನಿರಾಜ್, ಮಹಮ್ಮದ್, ಅಮೀರ್ ಜಾನ್, ಸಚಿiದ್ ಬಾಬು, ಸಾಸೀರ್ ಪಾಷ, ಮಂಜುನಾಥ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.