ಸಿಂಧನೂರು. ಮಾ.೩೧ ಬದಲಾದ ರಾಜಕೀಯ ಪರಿಸ್ಥಿತಿಯ ಅನುಗುಣವಾಗಿ ಅಳೆದು ತೂಗಿ ವಿಚಾರಮಾಡಿ ಬಿಜೆಪಿ ಹೈಕಮಾಂಡ ಕೊನೆಗೂ ಕಾಂಗ್ರೆಸ ಟಿಕೇಟ ಪ್ರಬಲ ಆಕಾಂಕ್ಷಿಯಾದ ಕೆ.ಕರಿಯಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ ಹಿಂದುಳಿದ ವರ್ಗದ ಯುವಕರ ಕಣ್ಮಣಿ ಕರಿಯಪ್ಪ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.
ಕಾಂಗ್ರೆಸ ಟಿಕೇಟ್ ಗಾಗಿ ತೀರ್ವ ಕಸರತ್ತು ನಡೆಸಿ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿದ್ದು ಟಿಕೇಟ ಸಿಗುವುದಿಲ್ಲ ಎನ್ನುವದು ಗೊತ್ತಾದ ತಕ್ಷಣ ತಮ್ಮ ಅಭಿಮಾನಿಗಳು ಹಿತೈಸಿಗಳ ಸಭೆ ನಡೆಸಿ ಅವರ ಸಲಹೆ ಸೂಚನೆ ನೀಡಿದ ಮೇಲೆ ಕಾಂಗ್ರೆಸ ಮುಖಂಡ ಕೆ.ಕರಿಯಪ್ಪ ನಿನ್ನೆ ಬಿಜೆಪಿ ಪಕ್ಷದ ರಾಜ್ಯ ಹಾಗೂ ಕೇಂದ್ರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ ಗೆ ಕೈಕೊಟ್ಟು ಕಮಲ್ ಇಡಿದಿದ್ದಾರೆ.
ಕಾಂಗ್ರೆಸ ಪಕ್ಷದ ಟಿಕೇಟ್.ಗಾಗಿ ಹಂಪನಗೌಡ ಬಾದರ್ಲಿ.ಬಸನಗೌಡ ಬಾದರ್ಲಿ ಕೆ.ಕರಿಯಪ್ಪ ಕಸರತ್ತು ನಡೆಸಿ ತಮ್ಮದೆ ಪ್ರಭಾವ ಬಳಸಿ ಟಿಕೇಟ ಪಡೆಯುವ ಹರಸಾಹಸ ನಡೆಸಿದ್ದರು ಇತ್ತೀಚಿಗಿನ ಪಕ್ಷದ ಬೆಳವಣೆಗೆ ನೋಡಿದರೆ ಹಂಪನಗೌಡ ಹಾಗೂ ಬಸನಗೌಡ ಇವರಿಬ್ಬರಲ್ಲಿ ತೀವ್ರ ಪೈಪೋಟಿ ಕಂಡುಬಂದಿತು ಅಲ್ಲದೆ ಹೈಕಮಾಂಡ ಕೂಡ ಇವರಿಬ್ಬರ ಪರ ವಕಾಲತ್ತು ವಸಿದಿದ್ದು ಕಂಡುಬಂತು ಆದರೆ ಎಲ್ಲೂ ಕರಿಯಪ್ಪ ನವರ ಹೆಸರು ಮುಂಚೂಣಿ ಗೆ ಬರಲೆ ಇಲ್ಲ ಮೊದಲು ಟಿಕೇಟ್ ಕೊಡಿಸುವ ಬಗ್ಗೆ ಭರವಸೆ ನೀಡಿದ್ದ ಸಿದ್ಧರಾಮಯ್ಯ ಸಹ ಕರಿಯಪ್ಪ ಪರ ಆಸಕ್ತಿ ತೋರಿಸದೆ ಅವರಿಬ್ಬರಿಗೆ ಪೈಪೋಟಿ ಇದೆ ನಿನಗೆ ಟಿಕೇಟ್ ಸಿಗುವುದು ಕಷ್ಷ ಎನ್ನುವ ಸಂದೇಶ ನೀಡಿದ ಮೇಲೆ ಕೆ ಕರಿಯಪ್ಪ ಮೌನಕ್ಕೆ ಶರಣೆಗಾಗಿ ಕಾಯ್ದು ನೋಡುವ ತಂತ್ರ ಅನುಸರಿಸಿದರು.
ಕೆ.ಕರಿಯಪ್ಪಗೆ ಬಿಜೆಪ ಪಕ್ಷ ಹೊಸದೇನು ಅಲ್ಲ ಹಿಂದೆ ಬಿಜೆಪಿಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ ಸಚಿವ ಶ್ರೀರಾಮಲು ಸ್ಥಾಪಿಸಿದ ಬಿ.ಎಸ್ ಆರ್ ಪಕ್ಷ ಸೇರಿ ೨೦೧೩ ರಲ್ಲಿ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿ ಎರಡನೆ ಸ್ಥಾನ ಪಡೆದು ಕೊಂಡರು ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಶ್ರೀರಾಮುಲು ಬಿಜೆಪಿಯೊಂದಿಗೆ ಪಕ್ಷ ಮರ್ಜ್ ಮಾಡಿ ಬಿಜೆಪಿ ಸೇರಿದ ಕಾರಣ ಕೆ.ಕರಿಯಪ್ಪ ಕಾಂಗ್ರೆಸ ಪಕ್ಷ ಕ್ಕೆ ಬಂದು ಸಿದ್ಧ ರಾಮಯ್ಯ ನವರ ಆಪ್ತ ಬಳಗದವರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
೨೦೧೮ ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷದ ಟಿಕೇಟ್ ಕೇಳಿದರು ಸಹ ಸಿಗಲಿಲ್ಲ ಇದರಿಂದ ಬೇಸರಗೊಂಡರು ಸಿದ್ಧರಾಮಯ್ಯ ನವರ ಮಾತಿಗೆ ಮನ್ನಣೆ ನೀಡಿ ಸುಮ್ಮನೆ ಯಾದರು ಈ ಸಲ ಟಿಕೇಟ್ ಸಿಕ್ಕೆ ಸಿಗುತ್ತೇದೆ ಮಾಜಿ ಮುಖ್ಯ ಮಂತ್ರಿ ಸಿದ್ಧ ರಾಮಯ್ಯ ನನ್ನ ಬೆನ್ನಿಗೆ ಇದ್ದಾರೆ ಎನ್ನುವ ಅಸೆ ಹೊಂದಿದ ಕೆ.ಕರಿಯಪ್ಪ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡು ಅಭ್ಯರ್ಥಿಯಾಗುವ ಕನಸು ಕಂಡ ಕರಿಯಪ್ಪ ಚುನಾವಣೆಯ ಪ್ರಚಾರ ಕೂಡ ನಡೆಸಿದ್ದರು ನನ್ನ ಪರವಾಗಿ ಹೈಕಮಾಂಡನಲ್ಲಿ ಮಾತನಾಡುವರು ಯಾರು ಇಲ್ಲ ಅಲ್ಲದೆ ಟಿಕೇಟ್ ಸಿಗುವುದು ಡೌಟ್ ಎಂದು ಗೊತ್ತಾದ ಮೇಲೆ ಮುಂದೇನು ಎನ್ನುವ ಚಿಂತೆ ಕರಿಯಪ್ಪ ನವರನ್ನು ಕಾಡತೋಡಗಿತು.
ಕಾಂಗ್ರೆಸ ಟಿಕೇಟ್ ಸಿಗುವುದು ಡೌಟ್ ಎಂದು ಗೊತ್ತಾದ ಬಳಿಕ ಕರಿಯಪ್ಪ ಅವರ ಅಭಿಮಾನಿಗಳು ಹಿತ್ತೈಸಿಗಳು ಸಭೆ ನಡೆಸಿ ನೀವು ಬಿಜೆಪಿ ಪಕ್ಷ ಸೇರಿ ಟಿಕೇಟ್ ಕೇಳಿ ಸಿಗುವ ಲಕ್ಷಣ ಇದ್ದು ನಿಮ್ಮ ಜೊತೆ ನಾವಿಧ್ಧೇವೆ ಎನ್ನುವ ಧೈರ್ಯವನ್ನು ನೀಡಿದ ಮೇಲೆ ಕಾಡಾ ಅಧ್ಯಕ್ಷ ರಾದ ಕೊಲ್ಲಾ ಶೇಷ ಗಿರಿರಾವು ಸೇರಿದಂತೆ ಮುಖಂಡರ ಜೊತೆ ಚರ್ಚಿಸಿ ಟಿಕೇಟ್ ಕೊಡಿಸುವ ಭರವಸೆ ಸಿಕ್ಕ ಮೇಲೆ ನಿನ್ನೆ ಕರಿಯಪ್ಪ ಬಿಜೆಪಿ ಪಕ್ಷ ಸೇರ್ಪಡೆಯಾದರು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕರಿಯಪ್ಪ ಬಿಜೆಪಿಗೆ ಬಂದಿದ್ದು ತಾಲ್ಲೂಕಿನಲ್ಲಿ ಪಕ್ಷದ ವರ್ಚಸ್ಸು ಹೆಚ್ಚಾಗಿದೆ ಕರಿಯಪ್ಪ ಕಾಂಗ್ರೆಸ ಬಿಟ್ಟ ಕಾರಣ ಹಿಂದುಳಿದ ವರ್ಗದ ಮತಗಳು ಕಾಂಗ್ರೆಸ ಗೆ ಬಿಳುವದು ಕಷ್ಷ ಇದರಿಂದ ಕಾಂಗ್ರೆಸ ಪಕ್ಷಕ್ಕೆ ನಷ್ಟವಾಗುವದಂತು ಸತ್ಯ ಕರಿಯಪ್ಪ ಗೆ ಪಕ್ಷ ಟಿಕೇಟ್ ನೀಡಿದರೆ ಮುಂದೆ ನಮ್ಮ ಭವಿಷ್ಯ ಏನು ಎನ್ನುವ ಆಲೋಚನೆಯಲ್ಲಿ ಪಕ್ಷದ ಟಿಕೇಟ್ ಆಕಾಂಕ್ಷಿಗಳಾದ ಕೆ ವೀರುಪಾಕ್ಷಪ್ಪ. ರಾಜೇಶ ಹಿರೇಮಠ. ಶಿವನಗೌಡ ಗೋರೆಬಾಳ. ಅಮರೇಗೌಡ ವಿರುಪಾಪುರ. ಕೆ ಮರಿಯಪ್ಪ ಇವರನ್ನು ಚಿಂತೆಗೀಡು ಮಾಡಿದೆ ಇವರು ಕರಿಯಪ್ಪ ಯವರನ್ನು ಅಪ್ಪಿಕೊಂಡು ಒಪ್ಪಿಕೊಳ್ಳುತ್ತಾರೊ ಇಲ್ಲವೊ ಎನ್ನುವದನ್ನು ಮಂದೆ . ಕಾಯ್ದ ನೋಡ ಬೇಕಾಗಿದೆ.
ಸಚಿವರಾದ ಭರತಿ ಬಸವರಾಜ. ಅಶ್ವತ್ಥ ನಾರಾಯಣ. ಶಾಸಕರಾದ ರವಿಕುಮಾರ.ನಾರಾಯಣ ಸ್ವಾಮಿ. ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷ ಗಿರಿ ರಾವ್. ಬಿಜೆಪಿಯ ಪಕ್ಷದ ಕೇಂದ್ರ ಮುಖಂಡರಾದ ನಿರ್ಮಾಲ ಕುಮಾರ ಸುರಾನ್. ಅಮರೇಶಪ್ಪ ಮೈಲಾರ್. ಎಂ.ಲಿಂಗಪ್ಪ. ಜೆ.ರಾಯಪ್ಪ ವಕೀಲರು. ಗಾಂಧಿನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ದುರಗಪ್ಪ ನಾಯಕ.ಯಲ್ಲಪ್ಪ ತೆಲಗಾರ. ಸುಕಾಲಪೇಟೆ ಏಳು ಕುರಿ ಮಲ್ಲಯ್ಯ.ಶಬ್ಬೀರ್. ಯಂಕಪ್ಪ ಬಡಗಿ. ಬಲಸು ಸೂರ್ಯನಾರಾಯಣ. ಬಸವರಾಜ ಬುರ್ಲಿವಕೀರು. . ಸೇರಿದಂತೆ ನೂರಾರು ಅಭಿಮಾನಿಗಳ ಜೊತೆ ಕೆ.ಕರಿಯಪ್ಪ ಬಿಜೆಪ ಪಕ್ಷಕ್ಕೆ ಸೇರ್ಪಡೆಯಾದರು.