ಕಾಂಗರೂಗಳು ಬೇಟೆಗೆ ಬಲಿ

ಕ್ಯಾನ್‌ಬರಾ, ಸೆ.೧೪ : ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾಗಿರುವ ಕಾಂಗರೂಗೆ ಸಂಕಷ್ಟ ಎದುರಾಗಿದೆ. ಏಕೆಂದರೆ ಈ ಪ್ರಾಣಿಯ ಚರ್ಮ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕ್ರೀಡಾಗೆ ಸಂಬಂಧಿಸಿದ ಶೂಗಳಿಗೆ ಕಾಂಗರೂ ಚರ್ಮವೇ ಫೆವರಿಟ್. ಹಾಗಾಗಿ ವರ್ಷಕ್ಕೆ ೧.೬ ದಶಲಕ್ಷ ಕಾಂಗರುಗಳು ಬೇಟೆಗೆ ಬಲಿಯಾಗುತ್ತಿವೆಯಂತೆ..!
ಕಾಂಗರೂ ರಾಷ್ಟ್ರೀಯ ಪ್ರಾಣಿ ಅದನ್ನು ಗೌರವದಿಂದ ಕಾಣಬೇಕು. ಆದರೆ ಅದರ ಚರ್ಮದಿಂದ ಸ್ಫೋರ್ಟ್ಸ್ ಶೂ ತಯಾರಿಸುವಲ್ಲಿ ಪ್ರತಿಷ್ಠಿತ ಕಂಪನಿಗಳು ಪೈಪೋಟಿಗೆ ಬಿದ್ದಿವೆಯಂತೆ.. ಹಾಗಾಗಿ ಕಾಂಗರೂ ಮರಿಗಳನ್ನು ಬೇಟೆಯಾಡುವುದು ಅವ್ಯಾಹತವಾಗಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಶ್ರೀಮಂತ ಆಟಗಳಿಗೆ ಕಾಂಗರೂ ಚರ್ಮಗಳಿಂದ ತಯಾರಿಸಿದ ಶೂಗಳೇ ಬೇಕು; ಹಾಗಾಗಿ ಬೆಲ್ಜಿಯಂ ಪ್ರಾಣಿ ದಯಾ ಸಂಘವು ಕಾಂಗರೂಗಳನ್ನು ಕೊಲ್ಲಬೇಡಿ ಮತ್ತು ಅವುಗಳ ಚರ್ಮದಿಂದ ಶೂಗಳನ್ನು ತಯಾರಿಸಬೇಡಿ ಎಂಬ ಅಭಿಯಾನವನ್ನು ಆರಂಭಿಸಿದೆಯಂತೆ.. ಪುಟ್ಬಾಲ್ ಶೂಗಳಿಗೆ ಕಾಂಗರೂ ಚರ್ಮವೇ ಬಳಕೆಯಾಗುತ್ತಿದೆ ಎಂಬುದು ವಿಪರ್ಯಾಸದ ವಿಷಯವಾಗಿದ್ದು, ಇಂತಹ ಬಳಕೆ ನಿಲ್ಲಬೇಕು ಮತ್ತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪ್ರಾಣಿ ದಯಾ ಸಂಘ ಹೇಳಿದೆ.
ಶ್ರೀಮಂತ ಕ್ರೀಡಾ ಆಟಗಾರರು ಕಾಂಗರುವಿನ ಚರ್ಮದಿಂದ ತಯಾರಿಸಿದ ಶೂ ಮತ್ತು ಇತರೇ ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ಅಲ್ಲಿನ ಮಾನವ ಆರ್ಥಿಕ ಕೇಂದ್ರ ವರದಿ ಮಾಡಿದೆ.
ಇದೇ ಸಂದರ್ಭದಲ್ಲಿ ಕಾಂಗರೂ ಚರ್ಮಕ್ಕೆ ವಿದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಇದರಿಂದ ಕಾಂಗರೂ ಸಂತತಿ ನಶಿಸುವ ಅಪಾಯದಲ್ಲಿದೆ ಎಂದೂ ಹೇಳಿರುವ ಬೆಲ್ಜಿಯಂ ಪ್ರಾಣಿ ದಯಾ ಸಂಘ ಈ ಸಂಬಂಧ ಕಾಮಗರೂ ಉಳಿಸಿ ಅಭಿಯಾನ ತೀವ್ರಗೊಳಿಸಿದೆ ಎಂದೂ ವರದಿಯಾಗಿದೆ.