ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ

(ಸಂಜೆವಾಣಿ ವಾರ್ತೆ)
ಇಂಡಿ :ಮಾ.25:ಪಟ್ಟಣದ ವಾರ್ಡ 18 ರಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಬದ್ದನಾಗಿದ್ದೇನೆ. ಚುನಾವಣೆಯಲ್ಲಿ ವಾರ್ಡ ಮತದಾರರಿಗೆ ಭರವಸೆ ನೀಡಿದಂತೆ ವಾರ್ಡಿನಲ್ಲಿ ರಸ್ತೆ,ಬೀದಿ ದೀಪ,ಚರಂಡಿ ಸೇರಿದಂತೆ ಸಾರ್ವಜನಿಕರ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಇಡೇರಿಸುವುದಾಗಿ ಪುರಸಭೆ ಸದಸ್ಯ ವಿಜು ಮೂರಮನ ಹೇಳಿದರು.
ಅವರು ಬುಧವಾರ ಪಟ್ಟಣದ ವಾರ್ಡ 18 ರಲ್ಲಿ 7 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ವಾರ್ಡಿನ ಸಾರ್ವಜನಿಕರು ತಮ್ಮ ಸಮಸ್ಯೆಗಳು ಯಾವುದೇ ಇದ್ದರೂ ನನ್ನ ಗಮನಕ್ಕೆ ತಂದರೆ ಆದಷ್ಟು ಬೇಗನೆ ತಮ್ಮ ಸಮಸ್ಯೆಗಳಿಗೆ ಸ್ಪಂ„ಸುವೆ ಎಂದು ಹೇಳಿದರು.ವಾರ್ಡಿನ ಎಲ್ಲ ಜನರು ನನ್ನ ಮತದಾರರೇ.ಚುನಾವಣೆ ಮುಗಿದ ಮೇಲೆ ವಾರ್ಡಿನ ಯಾವುದೇ ಪಕ್ಷದವರಿದ್ದರು ಅವರ ಸಮಸ್ಯೆಗೆ ಸ್ಪಂ„ಸುವುದು ನನ್ನ ಧರ್ಮ. ನನಗೆ ಪಕ್ಷ,ಜಾತಿ,ಧರ್ಮ ಮುಖ್ಯವಲ್ಲ. ಪಕ್ಷದ ಜೊತೆ ವಾರ್ಡಿನ ಅಭಿವೃದ್ದಿ ಮುಖ್ಯ. ವಾರ್ಡಿನ ಎಲ್ಲ ಸಾರ್ವಜನಿಕರು ನನ್ನ ಮತದಾರರೇ ಎಂದು ಭಾವಿಸಿದ್ದೇನೆ ಎಂದು ಹೇಳಿದರು.ಶೀಘ್ರದಲ್ಲಿಯೇ ವಾರ್ಡಿನಲ್ಲಿ ಬೀದಿ ದೀಪಕ್ಕಾಗಿ ವಿದ್ಯುತ ಕಂಬ,ಚರಂಡಿ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.ಅಭಿವೃದ್ದಿ ಕಾಮಗಾರಿಗಳಿಗೆ ವಾರ್ಡಿನ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಿವು ಬಗಲಿ,ಹರೀಶ ಹಿಟ್ನಳ್ಳಿ,ಗಣಪತಿ ಚಾಬುಕಸವಾರ,ಪಿಂಟೂ ರಾಠೋಡ,ಧರ್ಮು ಶಿವಪೂರ,ಆನಂದ ಪವಾರ ಇತರರು ಈ ಸಂದರ್ಭದಲ್ಲಿ ಇದ್ದರು.