ಕಾಂಕ್ರೀಟ್ ಮೇಸ್ತ್ರಿ ಗುಂಡಮ್ಮ ನಿಧನ

ಬಳ್ಳಾರಿ:ಮೇ,4 ನಗರದ 7 ವಾರ್ಚಡಿನ ಚಲುವಾದಿ ಬೀದಿ ನಿವಾಸಿ ಕಾಂಕ್ರೀಟ್ ಮೇಸ್ತ್ರಿ ಗುಂಡಮ್ಮ (78) ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಮೃತರು ಬಳ್ಳಾರಿ ನಗರ, ತಾಲೂಕು, ಹೊಸಪೇಟೆ, ನೆರೆಯ ಆಂಧ್ರದ ಗಡಿ ತಾಲೂಕು, ಗ್ರಾಮ, ಮಹಾರಾಷ್ಟ್ರದಲ್ಲೂ ಬಳ್ಳಾರಿ ನಗರದಿಂದ ಕಾಂಕ್ರೀಟ್ ಮಹಿಳಾ ಕಾರ್ಮಿಕರನ್ನು ಕರೆದೊಯ್ದು ಆರ್ ಸಿಸಿ ರೂಫ್ ಕಾಂಕ್ರೀಟ್ ಹಾಕಿಸುತ್ತಿದ್ದರು.
ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಗರದ ರೂಪನಗುಡಿ ರಸ್ತೆಯಲ್ಲಿನ ಹರಿಶಚಂದ್ರಘಾಟ್ ನಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿತು.