ಕಾಂಕ್ರೀಟ್ ಟೆಸ್ಟಿಂಗ್ ಮೊಬೈಲ್ ವಾಹನ ಲೋಕಾರ್ಪಣೆ

ಚಿತ್ರದುರ್ಗ.ಜು.೨೩; ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ವತಿಯಿಂದ ಕಾಂಕ್ರೀಟ್ ಟೆಸ್ಟಿಂಗ್ ಮೊಬೈಲ್ ವಾಹನವನ್ನು ಚಿತ್ರದುರ್ಗದ ತುರುವನೂರು ರಸ್ತೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಯಿತು,  ಗ್ರಾಹಕರು ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿ ಹೋಗಿ ಗ್ರಾಹಕರಿಗೆ ಉಚಿತ ಕಾಂಕ್ರೀಟ್ ಟೆಸ್ಟಿಂಗ್ ಮಾಡಲಾಗುತ್ತದೆ, ಗ್ರಾಹಕರು ಕನಸಿನ ಮನೆ ನಿರ್ಮಾಣಕ್ಕೆ ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು  ಹಾಗೂ  ವಾಟರ್ ಲಿಕೇಜ್ ಗೋಡೆಯ  ಬಿರುಕು ಬರೋದು ಸಮಸ್ಯೆಗಳನ್ನು ತಡೆಗಟ್ಟಲು  ಸೂಕ್ತ  ತಂತ್ರಜ್ಞಾನದೊಂದಿಗೆ ಅಲ್ಟ್ರಾಟೆಕ್ ತಾಂತ್ರಿಕ ಅಧಿಕಾರಿಗಳು ಸಲಹೆ ನೀಡುತ್ತಾರೆ ಎಂದು ಚಿತ್ರದುರ್ಗ ಜಿಲ್ಲಾ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾದ ದಿವಾಕರ್ ಅವರು ಮಾತನಾಡಿ ವಾಹನವನ್ನು ಲೋಕಾರ್ಪಣೆ ಮಾಡಿದರು, ಮೊಬೈಲ್ ವಾಹನ ವಿಶೇಷತೆಯೆಂದರೆ ವಾಹನದಲ್ಲಿ ಎಲ್ಇಡಿ ಟಿವಿ ಮುಖಾಂತರ ಹೇಗೆ ಕ್ಯೂರಿಂಗ್ ಮಾಡಬೇಕು ಎಂಬುವುದರ ಬಗ್ಗೆ ವಿಡಿಯೋ ತೋರಿಸಲಾಗುತ್ತದೆ ಹಾಗೂ  ಟೆಸ್ಟಿಂಗ್ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ, ಈ ಸಂದರ್ಭದಲ್ಲಿ ಇಂಜಿನಿಯರ್  ಶ್ರೀಕಾಂತ್. ಸುರೇಶ್ ಬಾಬು .ರವೀಂದ್ರ ಮತ್ತು ಅಲ್ಟ್ರಾಟೆಕ್ ಕಂಪನಿಯ ಅಧಿಕಾರಿಗಳಾದ ಅನಿಲ್ ಶಿಂಧೆ, ಗಣಪತಿ, ಗೋಪಾಲ್ ಮತ್ತು  ಕಂಪನಿಯ ಅಧಿಕೃತ ಮಾರಾಟಗಾರದ ಅರುಣ್, ಪಾಲಯ್ಯ, ಜಾಫರ್, ಶ್ರೀನಿವಾಸ್, ಮಾಧವ್ ಜೊತೆಗಿದ್ದರು

Attachments area