ಕಹಿ ಘಟನೆ ಪಾಠ ಮರೆಯೋಲ್ಲ

ಹೈದ್ರಾಬಾದ್.ಏ೧೧:ನಟಿ ಸಮಂತಾ ರುತ್ ಪ್ರಭು ಸಂದರ್ಶನವೊಂದರಲ್ಲಿ ಯಾವುದೇ ನೆನಪುಗಳನ್ನು ಮರೆಯಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಶಾಕುಂತಲಂ ಇದೇ ಶುಕ್ರವಾರದಂದು ತೆರೆಕಾಣಲಿದೆ. ಈ ಹಿನ್ನೆಲೆ ಕಳೆದ ಕೆಲ ದಿನಗಳಿಂದ ನಟಿ ಸಿನಿಮಾದ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬ್ಯಾಕು ಟು ಬ್ಯಾಕ್ ಸಂದರ್ಶನಗಳನ್ನು ಕೊಡುವುದರ ಮೂಲಕ ಸಖತ್ ಬ್ಯುಸಿಯಾಗಿದ್ದಾರೆ
ಟಾಲಿವುಡ್ ಟಾಪ್ ನಟಿ.ನಟಿ ಸಮಂತಾ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಹಿ ಕ್ಷಣಗಳನ್ನು ಅನುಭವಿಸಿದ್ದಾರೆ. ಅದರಿಂದ ಹೊರಬಂದು ವೃತ್ತಿಜೀವನದಲ್ಲಿ ಏಳಿಗೆ ಕಾಣಲು ಇಚ್ಛಿಸಿದ್ದಾರೆ. ಆದರೆ ನಟಿ ಯಾವುದೇ ನೆನಪುಗಳನ್ನು ಮರೆಯಲು ಬಯಸುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ಮಾತನಾಡುವ ಮನಸ್ಥಿತಿಯಲ್ಲೂ ಇಲ್ಲ ಅವರು. ಶಾಕುಂತಲಂ ಪ್ರಚಾರದ ವೇಳೆ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿರುವ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ತಾವು ಜೀವನದಲ್ಲಿ ಕಲಿತ ಪ್ರತೀ ಪಾಠವನ್ನು ಹಿಡಿದಿಟ್ಟುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಸಮಂತಾ ರುತ್ ಪ್ರಭು, ಕಳೆದ ಎರಡು ವರ್ಷಗಳಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹಲವು ಏರಿಳಿತಗಳನ್ನು ಕಂಡಿದ್ದಾರೆ.