ಕಸ ಸಂಗ್ರಹ : ಭೇಟಿ ನೀಡಿ ಪರಿಶೀಲಿಸಿದ ಪೌರಾಯುಕ್ತರು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ನ.19: ವಿಂಡಿಸದ ಕಸ ಮನೆಗಳಿಂದ ಸಂಗ್ರಹಿಸಿ ತಂದಿದ್ಯಾಕೆ?  ಇಷ್ಟು ದಿನವಾದರೂ ಜನರಲ್ಲಿ ಈ ಅಭ್ಯಾಸ ಬೆಳಸದ ನೀವು ಕೆಲಸಕ್ಕೆ ಬೇಡ ನಡೀರಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಹೊಸಪೇಟೆ ನಗರಸಭೆಯ ಪೌರಾಯುಕ್ತ ಮನೋಹರ ನಿವಾಸಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಹೌದು ಹೊಸಪೇಟೆಯ ಪ್ರಮುಖ ಬೀದಿ, ಓಣಿ ಹಾಗೂ ಕಸ ವಿಲೇವಾರಿ ಘಟಕಕ್ಕೆ ದೀಡೀರ್ ಭೇಟಿ ನೀಡಿದ ಅವರು ಜನರ ಬದಲಾಗಿ ಮನೆ ಮನೆ ಕಸ ಸಂಗ್ರಾಹಕರನ್ನು ತರಾಟೆ ತೆಗೆದುಕೊಳ್ಳವ ಮೂಲಕ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಕಸ ವಿಂಗಡಿಸದೆ ನೀಡಿದರೆ ಆಪತ್ತು ಎನ್ನುವ ಸಂದೇಶ ನೀಡಿದರು.
ಮನೆಯಿಂದ ಕಸ ಸಂಗ್ರಹಿಸುವಾಗ ಹಸಿ ಕಸ, ಒಣಕಸ, ಪ್ಲಾಸ್ಟಿಕ್ ಹೀಗೆ ಪ್ರತಿಯೊಂದು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇಮಾಡಬೇಕು ಇಲ್ಲವಾಗಿದ್ದಲ್ಲಿ ಸಂಗ್ರಹಿಸದಂತೆ ಹೇಳಿದರು ಸಂಗ್ರಹಿಸಿದ್ದು ಯಾಕೆ ? ಸುಮಾರು ವರ್ಷಗಳಿಂದ ಈ ಅಭ್ಯಾಸ ಮಾಡುವಂತೆ ಹೇಳಿದರು ಮಾಡಿಲ್ಲಾ ಎನ್ನುವುದಾದರೆ ಹೇಗೆ ? ತಮ್ಮ ಮನೆಯ ಕಸ ವಿಲೇ ಮಾಡಲಾಗದಿದ್ದರೆ ನಾವು ಊರ ಕಸವನ್ನು ಬೇರ್ಪಡಿಸುವುದು ಹೇಗೆ? ಎಂದೆಲ್ಲಾ  ಖಾರವಾಗಿ ಮಾತನಾಡುವ ಮೂಲಕ ಸಾರ್ವಜನಿರ ಮೇಲಿನ ಮುನಿಸನ್ನು ಸಿಬ್ಬಂದಿಗಳ ಮೂಲಕ ಹಾಕಿ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮೇಲೂ ಕಸ ವಿಂಗಡನೆಯ ಹೊಣೆಯನ್ನು ಕಾರವಾಗಿ ಹೇರುವ ಸೂಚನೆ ನೀಡಿದರು.
ಕಸ ವಿಂಗಡನೆ ಸಾರ್ವಜನಿಕ ಜವಾಬ್ದಾರಿ, ಈ ಪರಿಪಾಠ ಮೈಗೂಡಿಸಿಕೊಂಡು ಕಸ ವಿಂಗಡನೆಯನ್ನು ಸಮರ್ಪಕವಾಗಿ ಮಾಡಿ ಉತ್ತಮ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನಗರಸಭೆಯೊಂದಿಗೆ ಸಹಕರಿಸಬೇಕು. ಕಡ್ಡಾಯವಾಗಿ ಕಸ ವಿಂಗಡನೆ ಮಾಡಬೇಕು ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲಾಗುವುದು.
ಮನೋಹರ
ಪೌರಾಯುಕ್ತರು ನಗರಸಭೆ