ಕಸ ಸಂಗ್ರಹಿಸುವ ವಾಹನ, ಬುಟ್ಟಿ ವಿತರಣೆ

ಕುಂದಗೋಳ,ಜು12: ಪಟ್ಟಣ ಪಂಚಾಯತ ಆವರಣದಲ್ಲಿ ಒಟ್ಟು 8050 ಸಾವಿರ ಬುಟ್ಟಿ ಹಾಗೂ 7 ಲಕ್ಷ 50 ಸಾವಿರ 15 ನೇ ಹಣಕಾಸು ಅಡಿಯಲ್ಲಿ 1 ಕಸ ಸಂಗ್ರಹಿಸುವ ವಾಹನ ವಿತರಣೆಯನ್ನು ಶಾಸಕಿ ಕುಸುಮಾವತಿ ಚ ಶಿವಳ್ಳಿ ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು ಸಾರ್ವಜನಿಕರು ಪ್ಲಾಸ್ಟಿಕ,ಕಸ ಕಡ್ಡಿ ವಿಂಗಡಣೆ ಮಾಡಿ ಸ್ವಚ್ಛತೆಯನ್ನು ಕಾಪಾಡಲು ಪ್ರತಿ ಮನೆಗೆ 2 ಬುಟ್ಟಿ ವಿತರಿಸಿದ್ದೇವೆ, ಹಾಗೂ ಕಸ ಸಂಗ್ರಹಿಸಲು ವಾಹನ ವಿತರಿಸಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಗಣೇಶ ಕೋಕಾಟೆ ಮಾತನಾಡಿ ಸರ್ಕಾರದ ಪ್ರತಿಯೊಂದು ಸೌಲಭ್ಯ ತಲುಪಿಸುವುದು ನಮ್ಮ ಗುರಿಯಾಗಿದೆ ಅದರ ಸದುಪಯೋಗವನ್ನು ನಗರದ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ನಾರಾಯಣ ಡೊಂಬರ,ಉಪಾಧ್ಯಕ್ಷ ಹನಮಂತ ರಣತುರ,ವಾಗೇಶ ಗಂಗಾಯಿ,ಹನುಮಂತ ಮೇಲಿನಮನಿ.ದಿಲೀಪ್ ಕಲಾಲ, ಸರ್ತಾಜ ಬೇಗಂ ಮುಲ್ಲಾ,ನೀಲಮ್ಮ ಕುಂದಗೋಳ ಮಲಿಕ ಶಿರೂರ,ಬಸಪ್ಪ ತಳವಾರ,ಹನುಮವ್ವ ಕೋರಿ,ಗಂಗಮ್ಮ ಬಂಡಿವಾದ, ಸುನಿತಾ ಪಾಟೀಲ,ಮುತ್ತು ಕೊಪ್ಪದ ಸೇರಿದಂತೆ ಕೆ.ಎಸ್ ಪಾಟೀಲ ಮತ್ತಿತ್ತರು ಉಪಸ್ಥಿತರಿದ್ದರು.