ಕಸ ಸಂಗ್ರಹಕ್ಕ ಮಟಮಟ ಮಧ್ಯಾಹ್ನ ಬಾರಾಕ್ಕ ಬಂದ್ರ ಹ್ಯಾಂಗ್ರಿ? : ಶಾಸಕ ಅಲ್ಲಂಪ್ರಭು ಪಾಟೀಲ್ ಅಸಮಾಧಾನ

ಕಲಬುರಗಿ,ಜು.8:ಮನಿ ಮನಿ ಕಸಾ ಎತ್ತಿಕೊಂಡು ಹೋಗೋದು ಭಟಿ ತಪ್ಯದ, ಮಟಮಟ ಮಧ್ಯಾಹ್ನ 12 ಗಂಟೆಗೆ ಶೀಟಿ ಹೊಡ್ಕೊಂತ ಬಂದ್ರ ಹ್ಯಾಂಗ್ರಿ, ಆಗ ಮನ್ಯಾಗ ಯಾರಿರ್ತಾರೆ, ಎಲ್ಲಾರು ಕೆಲಸಕ್ಕ ಹೋಗಿರ್ತಾರೆ. ಹೀಗಾಗಿ ಬೆಳಗಿನ 6 ಅಥವಾ 7 ಗಂಟೆಯೊಳಗೆ ಕಸ ಸಂಗ್ರಹವಾಗಬೇಕು. ಂದಾಗ ಜನರಿಂದ ಸ್ಪಂದನೆ ಸಿಗ್ತದೆ ಎಂದು ಇಂದಿಲ್ಲಿ ನಡೆದ ಡಿಸಿ ಕಚೇರಿಯಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲ್ ತಮ್ಮ ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ನಗರ ಸ್ವಚ್ಚತೆ, ಸೌಂದರ್ಯೀಕರಣದ ಬಗ್ಗೆ ಮಾತನಾಡಿದ ಪಾಟೀಲರು 200 ಗಾಡಿ ಇದ್ರೂ ಸರಿಯಾಗಿ ಕಸ ಸಂಗ್ರಹ, ವಿಲೇವಾರಿ ಯಾಕೆ ಆಗುತ್ತಿಲ್ಲವೆಂದರು. ವಾರ್ಡ್‍ವಾರು ಕಸ ಸಂಗ್ರಹ ಬೆಳಗಿನ 8 ರೊಳಗೆ ಮುಗಿಯಬೇಕು. ಹಂಗೇ ವೇಳಾಪಟ್ಟಿ ಮಾಡಿರಿ ಎಂದು ಪಾಲಿಕೆಯ ಅಧಿಕಾರಿಗಳಿಗೆ ಒತ್ತಾಯಿಸಿದರು. ಅಗತ್ಯ ಸೂತನೆ ಕೊಡುವಂತೆ ಸಚಿವರಲ್ಲಿ ಕೋರಿದರು.

ನಗರದಲ್ಲಿ ನಿತ್ಯ 250 ಟನ್‍ಗೂ ಹೆಚ್ಚು ಕಸ ಬರುತ್ತಿದೆ. ಇವರು ಸರಿಯಾಗಿ ಸಂಗ್ರಹಿಸದೆ ಇರೋದರಿಂದ ಬಡಾವಣೆಗಳಲ್ಲಿ ಕಸ ಹಾಗೇ ಕೊಳೆಯುತ್ತಿದೆ. ನಗರ ಹೊಲಸು ಕಾಣುತ್ತಿದೆ. ಪಾಲಿಕೆಯಲ್ಲಿ ಪೌರ ಕಾರ್ಮಿಕರು, ವಾಹನಗಳಿದ್ದರೂ ನಿರ್ವಹಣೆ ಇಲ್ಲದೆ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲವೆಂದರು.

ಸಚಿವ ಪ್ರಿಯಾಂಕ್ ಖರ್ಗೆ ಶಾಸಕರ ಮಾತಿಗೆ ಪೂರಕವಾಗಿ ಮಾತನಾಡುತ್ತ ನಗರದಲ್ಲಿ ಕಸ ವಿಲೇವಾರಿಗೇ ನೂರಾರು ವಾಹನಗಲಿವೆ, ಮಾಸಿಕ 3 ಕೋಟಿ ರು ವೆಚ್ಚವಾಗುತ್ತಿದ್ದರೂ ನಗರದ ಕಸ ಹಾಗೇ ಕಾಣುತ್ತಿದೆ ಎಂದು ವಿಷಾದಿಸಿ ಸೂಕ್ತ ಕ್ರಮಕ್ಕೆ ಆಯುಕ್ತ ಭುವನೇಶ ಪಾಟೀಲರಿಗೆ ಸೂಚಿಸಿದರು.

ನಗರದಲ್ಲಿ ಚರಂಡಿ ಮಿಸ್ಸಿಗ್‍ಂ ಲಿಂಕ್ ಇರೋದರಿಂದ ಅನೇಕರು ಚರಂಡಿ ಕಾಮಗಾರಿಯಾದ ತಕ್ಷಣವೇ ಮನೆ ಬಿಡುವಂತಾಗಿದೆ. ರಾಜಾಪುರ ಬಾಗದಲ್ಲಂತೂ ಚರಂಡಿ ಮಾಡಿದವರು ಅದಕ್ಕೆ ಸರಿಯಾದ ಕನೆಕ್ಷನ್ ಕೊಟ್ಟಿಲ್ಲ. ಹೊಲಸು ನೀರು ಮನೆ ಹೊಕ್ಕು ಜನ ಗೋಳಾಡುತ್ತಿದ್ದಾರೆಂದು ಪಾಲಿಕೆಯ ಅವೈe್ಞÁನಿಕ ಕೆಲಸಗಳ ಬಗ್ಗೆ ಸಚಿವರ ಗಮನ ಸೆಳೆದರು.

ದತ್ತ ನಗರದಲ್ಲಿ ಚರಂಡಿ ಸಮಸ್ಯೆಯಿಂದ ಅನೇಕರು ಮನೆ ಬಿಟ್ಟು ಹೋಗಿದ್ದಾರೆ. ಚೆಂಬರ್ ಸದಾ ತುಂಬಿರುತ್ತವೆ. ಕೇಳೋರಿಲ್ಲದಂತಾಗಿದೆ ಎಂದರಲ್ಲೆದ ಬಯಲು ಬಹಿರ್ದೆಸೆಯೂ ಸಾಕಷ್ಟು ನಡೆದರೂ ಕ್ರಮಗಳಿಲ್ಲ. ಕಲಬುರಗಿ ನಗರ ಕಸ ಮುಕ್ತ ಆಗುವಂತೆ ತಾವು ಕ್ರಮ ಕೈಗೊಳ್ಳಿ ಎಂದು ಪ್ರಿಯಾಂಕ್ ಖರ್ಗೆಯವರಿಗೆ ಗಮನ ಸೆಳೆದರು.

ನಿರಂತರ ನೀರು ಯೋಜನೆ ಕುಂಟುತ್ತ ಸಾಗಿದೆ. ಎಲ್ಲೆಂದರಲ್ಲಿ ಅಗೆದಿದ್ದರಿಂದ ಜನ ತೊಂದರೆಯಲ್ಲಿದ್ದಾರೆ, ಹಲೆ ಜೇವರ್ಗಿ ರಸ್ತೆಯಲ್ಲಿನ 5 ಅಡಿ ಅಗಲ ಡಿವೈಡರ್ ಅವೈe್ಞÁನಿಕವಾಗಿದೆ. ಇಲ್ಲಿ ಹಣ ಪೆÇೀಲಾಗಿದೆ. ಕೆರೆ ಕಾಮಗಾರಿಯಲ್ಲಿಯೂ ಹಣ ಹಗರಣವಾಗಿದೆ. ಹಿಂದಿನ ಸರ್ಕಾರದಲ್ಲಿನ ಹಲವು ಕಾಮಗಾರಿಗಳು ಅವೈe್ಞÁನಿಕವಾಗಿವೆ. ಕಳಪೆಯಾಗಿವೆ. ಅವನ್ನೆಲ್ಲ ತನಿಖೆಗೊಳಪಡಿಸಿ ಗುಣಮಟ್ಟ ಕಾಪಾಡುವಂತೆಯೂ ಖರ್ಗೆಯವರ ಗಮನ ಸೆಳೆದರು.