ಕಸ ವಿಲೇವಾರಿ ವಾಹನಕ್ಕೆ ಚಾಲನೆ

ಚಿತ್ತಾಪುರ: ಸೆ.25:ತಾಲೂಕಿನ ದಿಗ್ಗಾಂವ್ ಗ್ರಾಮದಲ್ಲಿ ಕಸ ವಿಲೇವಾರಿ ವಾಹನಕ್ಕೆ ಶುಕ್ರವಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಿ ನೀಲಗಂಗಾ ಬಬಲಾದ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೀಯನಾಬೇಗಂ, ಉಪಾಧ್ಯಕ್ಷ ಶ್ರೀಶೈಲ್ ಪಾಟೀಲ್, ಗುರುಶಾಂತ್ ಬಾಗೋಡಿ, ಜಗನ್ನಾಥ್, ದೇವಿಂದ್ರ ಯಾಬಾಳ, ಚೆನ್ನವೀರ ಕಣಗಿ, ಶ್ರೀಮಂತ್ ಗುತ್ತೇದಾರ್, ಭೀಮಶಂಕರ್ ಕೊಳ್ಳಿ, ನಾಗೇಶ್ ಗುತ್ತೇದಾರ್, ರಾಘವೇಂದ್ರ ಗುತ್ತೇದಾರ್, ಶಂಭುಲಿಂಗ ಪಾಟೀಲ್, ಸೇರಿದಂತೆ ಇತರರಿದ್ದರು.