ಕಸ ನಿರ್ವಹಣೆಗೆ 200 ರೂ. ವಸೂಲಿಗೆ ಪಾಲಿಕೆ ಚಿಂತನೆ

ಬೆಂಗಳೂರು, ನ.೧೮- ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಸಮಸ್ಯೆಗೆ ಬಿಬಿಎಂಪಿ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದು, ಪ್ರತಿ ಮನೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ ಮಾಸಿಕ ೨೦೦ ರೂ. ವಸೂಲಿಗೆ ಪಾಲಿಕೆ ಚಿಂತನೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ನಷ್ಟದಲ್ಲಿ ನಡೆಯುತ್ತಿರುವ ಬಿಬಿಎಂಪಿ ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಭರಿಸಲು ಈ ಚಿಂತನೆ ನಡೆಸಿದೆ.

ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಗಾರ್ಬೆಜ್ ಸೆಸ್ ಜೊತೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ ೨೦೦ ರೂ. ಪಡೆಯಲು ಚಿಂತನೆ ನಡೆಸಿದೆ. ಅಲ್ಲದೆ, ಕಸ ನಿರ್ವಹಣೆಗೆ ಪ್ರತಿ ವರ್ಷ ೧ ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಗಾರ್ಬೆಜ್ ಸೆಸ್ ವಿಧಿಸುವುದರಿಂದ ೫೦-೫೪ ಕೋಟಿ ರೂ. ಸಂಗ್ರಹವಾಗಲಿದೆ. ನಷ್ಟವನ್ನು ಸರಿದೂಗಿಸಲು ಪಾಲಿಕೆ ಮುಂದಾಗಿದೆ.

ಹೀಗಾಗಿ ನಗರದಲ್ಲಿರುವ ಮನೆಗಳ ಆಧಾರದ ಮೇಲೆ, ಬಾಡಿಗೆದಾರರಿಂದಲೂ ೨೦೦ ರೂ. ಪಡೆಯಲು ಯೋಚನೆ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿದೆ.