ಕಸ ತೆರವಿಗೆ ಒತ್ತಾಯ

ರಾಯಚೂರು.ಮಾ.೨೫- ನೇತಾಜಿ ನಗರ ಬಡಾವಣೆಯಲ್ಲಿ ಸ್ತ್ರೀ-ಪುರುಷ ಸಾರ್ವಜನಿಕ ಶೌಚಾಲಯಗಳಿದ್ದು, ಇದರ ಇಂದಿನ ಭಾಗದಲ್ಲಿ ಪುರಾತನ ರಾಜ ಕಾಲುವೆಯ ಹೂಳು ತೆಗೆಸಬೇಕು ಮತ್ತು ಕಸದ ರಾಶಿ ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಪರಶುರಾಮ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ನೀಡಿ, ಆಗ್ರಹಿಸಿದ್ದಾರೆ. ಕಸದ ರಾಶಿ ತೀವ್ರವಾಗಿರುವುದರಿಂದ ಗಾಳಿ ಬಂದಾಗ ಕಸ ಮನೆಗೆ ನುಗ್ಗುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ನೇತಾಜಿ ನಗರ ಬಡಾವಣೆಯಲ್ಲಿ ಕಸ ತೆರವಿಗೆ ಮನವಿ ಮಾಡಿದ್ದಾರೆ.