ಕಸೂತಿ ಕಲಿತ ದೀಪಿಕಾ

ಮುಂಬೈ,ಏ.೧೭-ಕೆಲವು ವಾರಗಳ ಹಿಂದೆ, ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿಮಾನಿಗಳೊಂದಿಗೆ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ, ದಂಪತಿಗಳು ತಮ್ಮ ಮೊದಲ ಮಗುವಿಗೆ ಕುತೂಹಲದಿಂದ ಕಾಯುತ್ತಿದ್ದಾರೆ .
ಇತರ ತಾಯಂದಿರಂತೆ ದೀಪಿಕಾ ಪಡುಕೋಣೆ ಕೂಡ ಮಗುವಿನ ಆಗಮನಕ್ಕಾಗಿ ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.ಆದ್ದರಿಂದ, ಆ ದಿನ ಬರುವವರೆಗೂ ತನ್ನನ್ನು ತಾನು ಆರೋಗ್ಯವಾಗಿ ಇರಲು,ಸಮಯ ಕಳೆಯಲು, ಯಾವುದಾದರೂ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ತೀರ್ಮಾನಿಸಿದ ನಟಿ ಮತ್ತೊಂದು ಕೌಶಲ್ಯವನ್ನು ಕಲಿಯಲು ನಿರ್ಧರಿಸಿದ್ದಾರೆ ಅದು ಹೆಣಿಗೆ ಮತ್ತು ಕಸೂತಿ. ಕೆಲವು ನಿಮಿಷಗಳ ಹಿಂದೆ, ಸಧ್ಯ ತಾವು ಕಲಿಯುತ್ತಿರುವ ಕಸೂತಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ . ಚಿತ್ರದಲ್ಲಿ ಹಸಿರು ಎಲೆಗಳೊಂದಿಗೆ ಹೂವನ್ನು ಕಾಣಬಹುದು. ಚಿತ್ರವನ್ನು ಹಂಚಿಕೊಂಡ ಅವರು, ಆಶಾದಾಯಕವಾಗಿ ನಾನು ಪೂರ್ಣಗೊಳಿಸಿದ ನಂತರ ಮತ್ತೊಂದು ಚಿತ್ರ ಹಂಚಿಕೊಳ್ಳುವುದು ಖಂಡಿತ ಎಂದಿದ್ದಾರೆ.