ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಗುರುಮಠಕಲ್,ಜು.22-ಕಸಾಯಿಖಾನೆಗೆ ಸಾಗಿಸಲೆಂದು ಇಲ್ಲಿನ ಎ.ಪಿ.ಎಂ.ಸಿ. ಯಲ್ಲಿ ಕಟ್ಟಿ ಹಾಕಿದ್ದ ಗೋವುಗಳನ್ನು ರಕ್ಷಣೆ ಮಾಡುವಲ್ಲಿ ಯುವಕರು ಯಶಸ್ವಿಯಾಗಿದ್ದಾರೆ. ಸುಮಾರು 19 ಜಾನುವಾರುಗಳನ್ನು ರಾತ್ರಿಯ ವೇಳೆಯಲ್ಲಿ ಖಸಾಯಿ ಖಾನೆಗೆ ಸಾಗಿಸಲೆಂದು ಜಾನುವಾರು ಗಳನ್ನು ಕಟ್ಟಿಹಾಕಲಾಗಿತ್ತು. ಹೋರಿಗಳನ್ನು ಮತ್ತು ಕರುಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ನಗರದ ಬಿಜೆಪಿ ಘಟಕ ಹಾಗೂ ಸ್ಥಳೀಯ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಖಾಜಾ ಹುಸೇನ್ ಮತ್ತು ಪಿಎಸ್ಐ ಶ್ರೀಶೈಲ ಅಂಬಟಿ ಅವರ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಜಾನುವಾರುಗಳನ್ನು ಸೇಡಂ ತಾಲ್ಲೂಕಿನ ತರನಳ್ಳಿ ರಸ್ತೆಯಲ್ಲಿರುವ ನವನೀತ ಗೋ ಶಾಲೆಗೆ ಆರೈಕೆಗಾಗಿ ಒಪ್ಪಿಸುವ ಕಾರ್ಯ ಮಾಡಿದ್ದಾರೆ ಈ ಸಂದರ್ಭದಲ್ಲಿ ಬಸಪ್ಪ ಸಂಜನೊಳ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿನಾಯಕ ಜನಾರ್ದನ, ರವಿಂದ್ರ ರೆಡ್ಡಿ ಪೊತುಲ್, ಗೋಪಾಲಕೃಷ್ಣ ಮೇದಾ, ಲಾಲಪ್ಪ ತಲಾರಿ, ಶ್ರೀನಿವಾಸ ಗಾಳ ಇತರರು ಇದ್ದರು.