ಕಸಾಪ ಸಮಿತಿಗೆ ಪ್ರತಿನಿಧಿಗಳ ನೇಮಕ


ಸಂಜೆವಾಣಿ ವಾರ್ತೆ
ಸಂಡೂರು: ಸೆ: 4: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕೇಂದ್ರ ಪರಿಷತ್ತಿನ ನೂತನ ಬೈಲಾದ ಅನ್ವಯ ಇಬ್ಬರು ಸಂಘಟನಾ ಕಾರ್ಯದರ್ಶಿಗಳು, ಒಂದು ಅಲ್ಪಸಂಖ್ಯಾತ ಪ್ರತಿನಿಧಿ ಮತ್ತು ಒಂದು ಹಿಂದುಳಿದ ವರ್ಗದ ಪ್ರತಿನಿಧಿಯನ್ನು ನೇಮಕ ಮಾಡಲು ಮಾಹಿತಿ ನೀಡಿದ್ದು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅನುಮೋದನೆ ದೊರೆತಿದೆ.
ನೂತನವಾಗಿ ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಗಡಾದ್ ಮತ್ತು ಟಿ.ಷಣ್ಮುಖಪ್ಪ ಅವರನ್ನು, ಅಲ್ಪ ಸಂಖ್ಯಾತರ ಪ್ರತಿನಿಧಿಯಾಗಿ ಕೆ.ಬಷೀರ್ ಖಾದರ್ ಅವರನ್ನು ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ, ಸ್ವಾಮಿ.ಜಿ. ಅವರನ್ನು ನೇಮಿಸಲಾಗಿದೆ.
ಪದನಿಮಿತ್ತ ಸದಸ್ಯರುಗಳನ್ನಾಗಿ ಕೊಟ್ರೇಶ್.ಪಿ. ಪ್ರಾಂಶುಪಾಲರು ಸರ್ಕಾರಿ ಪದವಿ ಕಾಲೇಜ್ ಸಂಡೂರು, ರಾಜು.ಅರ್. ಪ್ರಾಂಶುಪಾಲರು ಪದವಿಪೂರ್ವ ಕಾಲೇಜ್ ಸಂಡೂರು, ಚೌಕಲಿ ಪರಶುರಾಮಪ್ಪ ಅಧ್ಯಕ್ಷರು ಸರ್ಕಾರಿ ನೌಕರರ ಸಂಘ ಇವರನ್ನು ನೂತನವಾಗಿ ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.