ಕಸಾಪ ಸದಸ್ಯರ ಮನೆಯ ಮೇಲೆ ಹಾರಾಡಿದ ಕನ್ನಡ ಧ್ವಜ

ಸಂಜೆವಾಣಿ ವಾರ್ತೆ

ನ್ಯಾಮತಿ.ನ.೪; ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸದಸ್ಯರ ಮನೆಯ ಮೇಲೆ ಶಾಶ್ವತ ಕನ್ನಡ ಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು  ಕನ್ನಡ ರಾಜ್ಯೋತ್ಸವ ದಿನದಂದು ಮುಂದುವರೆಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಸೈಯದ್ ಅಪ್ಸರ್ ಪಾಷ ಅವರ ಮನೆಯ ಮೇಲೆ ಶಾಶ್ವತ ಕನ್ನಡ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಹಾರಿಸಲಾಯಿತು. ಕನ್ನಡನಾಡಿನಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಪ್ರೀತಿಸಬೇಕು, ಗೌರವಿಸಬೇಕು ಹಾಗೂ ನಮ್ಮ ಕಸಾಪ ಮನವಿಯಂತೆ ಕನ್ನಡ ಧ್ವಜವನ್ನು ನಮ್ಮ ಮನೆಯ ಮೇಲೆ ಹಾರಿಸಿದ್ದೇವೆ ಎಂದು ಸೈಯದ್ ಅಪ್ಸರ್ ಪಾಷ ಮತ್ತು ಅವರ ಕುಟುಂಬದವರು ಸಂತಸ ವ್ಯಕ್ತಪಡಿಸಿದರು. ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಬೆಳಗುತ್ತಿ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಕವಿರಾಜ, ಗೋವಿನಕೋವಿ ಘಟಕದ ಅಧ್ಯಕ್ಷ ಆನಂದ, ಸದಸ್ಯರಾದ ಚಂದ್ರೇಗೌಡ, ಚಂದನಜಂಗ್ಲೀ, ಬೋಜರಾಜ,ಸೋಮಸುಂದರರಾಜ ಅರಸ್, ಆರುಂಡಿ ಮಂಜಪ್ಪ, ನಾಗರತ್ನ ಇದ್ದರು.