
ಸಿಂಧನೂರು.ಮೇ.೦೫- ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಸಾಪ ದಿಂದ ಸನ್ಮಾನಿಸಿ ಗೌರವಿಸುವ ಮೂಲಕ ಒಂದು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನಾಗಿ ಮಾಡಲಾಯಿತು.
ತಾ.ಪಂ. ಕಛೇರಿಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಕಸಾಪದ ೧೦೯ ನೇ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಬಸವ ಕೇಂದ್ರದ ಜಿಲ್ಲಾಧ್ಯಕ್ಷರಾದ ವೀರಭದ್ರಪ್ಪ ಕುರಕುಂದಿ ಉದ್ಘಾಟಿಸಿ ಮಾತನಾಡಿದರು.
ಕಸಾಪ ಕೆಲವೆ ಜನರಿಗೆ ಸೀಮಿತವಾಗದೆ ಸರ್ವರಿಗೆ ಬೇಕಾದ ಸಂಸ್ಥೆಯಾಗಿದೆ. ಭೂಮಿ ಮೇಲೆ ಇರುವ ಸಕಲ ಜೀವಿ ರಾಶಿಗಳಿಗೆ ಅನ್ನ ನೀಡುವ ರೈತರಿಗೆ ನಾವು ಧನ್ಯವಾದ ಗಳನ್ನು ಹೇಳಬೇಕು ಜೊತೆಗೆ ದೇಶ ಕಾಯುವ ಸೈನಿಕರನ್ನು ನೆನೆಯಬೇಕು ಎಂದರು.
ಯದ್ದಲ ದೊಡ್ಡಿ ಮಹಾಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತ್ಯಿ ಪೋ.ಶಾಶ್ವತ ಸ್ವಾಮಿ ಮುಕುಂದ ಮಠ, ಶರಣಪ್ಪ ಹೊಸಳ್ಳಿ, ಡಾ.ಶರೀಫ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್ ಕಂಬಳಿ, ಸಮಂಗಲಾ ಚಿಂಚರಕಿ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಇದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಡಪದ ಸಮಾಜದ ಮುಖಂಡರಾದ ಎಂ. ಕಾಶಿನಾಥ.ನಾಗಪ್ಪ ಪೋಲೀಸ್, ಸೈನಿಕ ವಿರೇಶ ಯಾದವ, ಶಿಕ್ಷಕ ರಾಜಕುಮಾರ, ಡಾ.ಎಸ್‌ವಿ. ಪಾಟೀಲ, ಅಂಚೆ ಇಲಾಖೆ ಶ್ರೀನಿವಾಸ, ಕಾರ್ಮಿಕ ಹುದಂಡಪ್ಪ, ಪತ್ರಿಕೆಯ ವಿತರಕರಾದ ಕೊಟ್ರೇಶ ಸ್ವಾಮಿ, ಸಾರಿಗೆ ಸೂಗಯ್ಯ ಸ್ವಾಮಿ, ಸಮಗಾರ ಪರಶುರಾಮ, ಪೌರ ಕಾರ್ಮಿಕ ಮಹಿಳೆ ಅಂಬಮ್ಮ ಪೂಜಾರ, ಸಾಹಿತ್ಯ ದುರುಗಪ್ಪ ಗುಡದೂರ, ಯಲ್ಲಪ್ಪ ಮಡಿವಾಳ ಇವರನ್ನು ಸನ್ಮಾನ್ಯಿಸಿ ಗೌರವಿಸಲಾಯಿತು.
ಮೌಲಪ್ಪ ಮಾಡ ಸಿರವಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಗೀತ ಸಾರಂಗಿ ಮಠ ಪರಿಚಯ ಮಾಡಿದರು. ಶೇಖ ಬಷೀರ ಎತ್ಮಾರಿ ಸೇರಿದಂತೆ ಇತರರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.