ಕಸಾಪ ಶಾಶ್ವತ ಕಟ್ಟಡ ಶ್ರೀನಿವಾಸ್ ಇಂಗಿತ

ಚಿಕ್ಕಬಳ್ಳಾಪುರ.ಜೂ೨:ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಪ್ರದೀಪ್ ಈಶ್ವರ್ ಅಧಿಕಾರದ ಅವಧಿಯಲ್ಲಿ ಗಡಿ ಜಿಲ್ಲಾ ಕೇಂದ್ರದಲ್ಲಿ ಕನ್ನಡದ ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಶಾಶ್ವತ ಕಟ್ಟಡ ಸೌಲಭ್ಯಕ್ಕೆ ಅನುಕೂಲ ಆಗುವ ನಿರೀಕ್ಷೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾಕ್ಟರ್ ಕೈವಾರ ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ತಾಲೂಕು ದಂಡಾಧಿಕಾರಿಗಳ ಕಚೇರಿಯ ಒಳ ಆವರಣದಲ್ಲಿ ನೂತನವಾಗಿ ಶಾಸಕರ ಕಚೇರಿಯನ್ನು ಉದ್ಘಾಟಿಸುವ ಸಂದರ್ಭದಲ್ಲಿ ಅವರನ್ನು ಡಾಕ್ಟರ್ ಕೈವಾರ ಶ್ರೀನಿವಾಸ್ ರವರು ಅವರ ಅಭಿಮಾನಿಗಳೊಂದಿಗೆ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರೊಂದಿಗೆ ಆಗಮಿಸಿ ಸನ್ಮಾನಿಸಿ ತ್ರಿಕಾಲಜ್ಞಾನಿ ಶ್ರೀ ಯೋಗಿ ನಾರಾಯಣ ಯತೀಂದ್ರ ಚಿತ್ರಪಟವನ್ನು ಕೊಟ್ಟು ಶುಭ ಹಾರೈಸಿದರು. ಪ್ರದೀಪ್ ಈಶ್ವರ್ ಅವರು ಅತ್ಯಂತ ಕ್ರಿಯಾಶೀಲ ರಾಗಿದ್ದು ಇವರು ಶಾಸಕ ಸ್ಥಾನವನ್ನು ವೈಯಕ್ತಿಕ ಪ್ರತಿಷ್ಠೆಗಾಗಿ ಎಂದು ತಿಳಿದುಕೊಳ್ಳದೆ ಅದು ಜನಸೇವೆಗಾಗಿ ದೊರೆತ ಸ್ಥಾನ ಎಂದು ಅರಿತವರಾಗಿದ್ದಾರೆ ಇಂತಹವರು ರಾಜ್ಯದಲ್ಲಿ ಅತ್ಯಂತ ಅವಶ್ಯಕವಾಗಿದ್ದಾರೆ ಎಂದು ಗುಣಗಾನ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಣಜನಹಳ್ಳಿ ಜೈರಾಮ್ ಮಾತನಾಡಿ ಪ್ರದೀಪ್ ಈಶ್ವರ್ ರವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬಲಿಜ ಜನಾಂಗದ ಮುಖಂಡರುಗಳಾದ ಮಾಜಿ ಸೈನಿಕ ಪಿಎಂ ರಘು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೋಲಾಟಲ ರಾಮಚಂದ್ರ ಹೆಸರಾಂತ ನೃತ್ಯ ಕಲಾವಿದ ಡ್ಯಾನ್ಸ್ ಶ್ರೀನಿವಾಸ್ ಹಾಗೂ ಮತ್ತಿತರರು ಹಾಜರಿದ್ದರು.