ಕಸಾಪ ವತಿಯಿಂದ ಸಾಧಕರಿಗೆ ಸನ್ಮಾನ

ಹುಮನಾಬಾದ:ಜೂ.26:ಕಸಾಪ ವತಿಯಿಂದ ಆಯೋಜಿಸಿದ ಸಾಧಕರೊಂದಿಗೆ ಸಂವಾದ 12 ನೇ, ತಿಂಗಳ ಕಾರ್ಯಕ್ರಮ ಧುಮನಸೂರ ನಲ್ಲಿ ಸಾಧಕರಾದ ಮಹಾದೇವಪಗಪ್ಪ ಉಪ್ಪಿನ ಅವರ ಮನೆಯಲ್ಲಿ ಆಯೋಜಿಸಲಾಯಿತು, ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮಾಜ ಮುಖಿ ಕಾರ್ಯಕ್ರಮದ ಮುಖಾಂತರ ಅನೇಕ ಸಾಧಕರನ್ನು ಹುಡುಕಿ ಅವರ ಜೋತೆ ಸಂವಾದ ಕಾರ್ಯಕ್ರಮ ನಡೆಸುತ್ತಿರುವದು ತುಂಬ ಸಂತೋಷದ ವಿಷಯ ಎಂದು ನುಡಿದರು ,

ಕಾರ್ಯಕ್ರಮದ ಆಶಯನುಡಿಯನ್ನು ಕಸಾಪ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ ಸೂಗಿ ನುಡಿದರು,, ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕಸಾಪ ಗೌರವ ಅಧ್ಯಕ್ಷರಾದ ಡಾ.ನಾಗನಾಥ ಹುಲಸೂರೆ ಮಾತನಾಡಿ ಪರಿಷತ್ತು ಸಾಹಿತ್ಯ ,ಸಾಧಕರ ,ಚಿಂತಕರ ಜೋತೆಗೂಡಿ ನಿರಂತರ ಕಾರ್ಯಕ್ರಮ ಮಾಡುತ್ತಿದೆ ಎಂದು ನುಡಿದರು .

,ಮುಖ್ಯ ಅತಿಥಿಯಾಗಿ ಕಾಶಿನಾಥ ಕೊಡ್ಲಿ ವಹಿಸಿಕೂಂಡಿದರು, ಮಹಾದೇವಪ್ಪ ಉಪ್ಪಿನ ಅವರೂಂದಿಗೆ ಸಂವಾದಕರಾದ ಕೆ.ಗುಂಡಪ್ಪಾ ಅವರು ಸಂವಾದ ಕಾರ್ಯಕ್ರಮ ನೇರವೆರಿಸಿ ಕೂಟ್ಟರು, ಸಾಧಕರಾದ ಮಹಾದೇವಪ್ಪ ಉಪ್ಪಿನ ತಮ್ಮ ಮನದಾಳದ ಮತುಗಳಿಂದ ತಮ್ಮ ಸಾಧನೆಯನ್ನು ಹಂಚಿಕೊಳ್ಳುತ್ತ ಇಡಿ ನನ್ನ ಜೀವನ ಕನ್ನಡ ಭಾಷೆ ಹಾಗು ಮಕ್ಕಳಿಗೆ ಕನ್ನಡ ಕಲಿಸುವ ಹಾಗೂ ಶಿಕ್ಷಣ ನೀಡುವ ಉದ್ದೇಶದಿಂದ ಇಷ್ಟ ಪಟ್ಟು ಕನ್ನಡ ಪ್ರಾದ್ಯಪಕನಾಗಿದ್ದೆನೆ ಎಂದು ಹೆಮ್ಮೆಯಿಂದ ಹೇಳುತ್ತಾ, ಇಡಿ ನನ್ನ ವಿದ್ಯಾರ್ಥಿ ಜೀವನ ಧಾರವಾಡನಲ್ಲಿ ಮುಗಿಸಿದು ಅನೇಕ ಹೆಸರಾಂತ ಸಾಹಿತಿಗಳ ಜೋತೆ ವಡನಾಟ ಅವರ ಸ್ನೇಹ ನನಗೆ ಸಾಹಿತ್ಯದ ಕಡೆ ವಾಲುವಂತೆ ಮಾಡಿತ್ತು , ಎಮ್. ಎಮ್ ಕಲಬುರ್ಗಿ, ಬೇಂದ್ರೆ,ಅಂತಹಾ ಮಹಾನ ಸಾಹಿತ್ಯದ ಮಹಾ ಪುರುಷರ ಆಶ್ರಯದಲ್ಲಿ ಬೆಳೆದೆ ಹೀಗೆ ತಮ್ಮ ಮನದಾಳದ ಮಾತುಗಳು ಹಂಚಿಕೋಂಡರು,
ಚಿಟ್ಟಗುಪ್ಪಾ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆ ಆಗಿದ್ದು ತುಂಬಾ ಸಂತೋಷದ ವಿಚಾರ, ಹಾಗೆ ಅನೇಕ ಪ್ರಶಸ್ತಿಗಳು ನನಗೆ ಬಂದಿವೆ ಪಿಯುಸಿ ಪಾಠ್ಯ ಪರಿಷ್ಕರಣೆ ಸದಸ್ಯರಾಗಿ ಸೇವೆ ಸಲ್ಲಿಸಿರುವೆ ನನ್ನ ಸಾಹಿತ್ಯ ಹಾಗೂ ಚಿಂತನೆಯ ವಿಷಯದಲ್ಲಿ ನನ್ನ ಕುಟುಂಬ ಹಾಗೂ ಗೆಳೆಯರು ತುಂಬಾ ಸಹಕರಿಸಿದ್ದಾರೆ ಎಂದು ತಮ್ಮ ಮನದಾಳದ ಮಾತುಗಳು ಹಂಚಿಕೊಂಡರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ಧಲಿಂಗ ವಿ ನಿರ್ಣಾ ಮಾತನಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಅಪರೂಪದ ಸಾಧಕರನ್ನು ಹುಡುಕಿ ಅವರ ಜೊತೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಅದರಲ್ಲಿ ಮಹಾದೇವಪ್ಪ ಉಪ್ಪಿನ ಸಾಧನೆ ಒಂದು ಮಾದರಿ ಸಾಧಕರ ಜೋತೆ ಪರಿಷತ್ತು ಸಂವಾದ ಕಾರ್ಯಕ್ರಮ ಮಾಡಿರುವದು ತುಂಬಾ ಸಂತೋಷ , ವಿಶೇಷ ಈ ಕಾರ್ಯಕ್ರಮ ಒಂದು ವರ್ಷದ ಸಂಭ್ರಮದ ಕಾರ್ಯಕ್ರಮ , ಅದೆ ರೀತಿ ಕನ್ನಡ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಅಭಿನಂದನೆಗಳು ಸಲ್ಲಿಸುತ್ತಾ, ಸಾಹಿತ್ಯ ಪರಿಷತ್ತಿನ ಅತ್ಯಂತ ಯಶಸ್ವಿ ಕಾರ್ಯಕ್ರಮ ಸಾಧಕರೊಂದಿಗೆ ಸಂವಾದ 12 ನೇ ತಿಂಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯುತ್ತ ಸಾಗುತ್ತಿದೆ ಇಂತಹ ಸಾದಕರು ಅನೇಕರು ನಮ್ಮ ತಾಲೂಕಿನಲ್ಲಿರುವರು ಅಂತಹ ಸಾಧಕರಿಗೆ ವೇದಿಕೆ ಕಲ್ಪಿಸುವ ಕಾರ್ಯ ನಿರಂತರ ಮಾಡುತ್ತೆವೆ ಎಂದು ನುಡಿದರು,

ಕಾರ್ಯಕ್ರಮದಲ್ಲಿ ಸದಾಶಿವಯ್ಯ ಮಠಪತಿ ,, ಶಶಿಧರ ಪಾಟೀಲ , ರಮೇಶ ರೆಡ್ಡಿ, ಐ ಎಸ್ ಶಕೀಲ,ವಿಜಯಕುಮಾರ ಚಟ್ಟಿ, ಸುಭಾಷ ವಾಲ್ದೋಡ್ಡಿ , ಬಸವತೀರ್ಥಪ್ಪ , ವಿಠಲ ಜವಳಿ,ರಮೇಶ ಭಮಶೆಟ್ಟಿ,ಮನೋಜ ಪಾಟೀಲ, ಉಮೇಶ,ದತ್ತು, ಪ್ರಶಾಂತ ,ಗೀತಾ ರೆಡ್ಡಿ, ಜೈಶ್ರೀ,ವಿದ್ಯಪೂರ್ಣಿಮ,ರಾಧಿಕಾ,ಕರುಣಾದೇವಿ ಇತರರಿದ್ದರು, ಕಾರ್ಯಕ್ರಮವನ್ನು ಮಾಥರ್ಂಡ ತಳಗೇರಿ ನಿರ್ವಹಿಸಿದರು, ರವಿರಾಜ ಭಮಶೆಟ್ಟಿ ಸ್ವಾಗತಿಸಿದರು, ಮಡೆಪ್ಪಾ ಕುಂಬಾರ ವಂದಿಸಿದರು ಅನೇಕ ಇದ್ದರು.