ಕಸಾಪ ವತಿಯಿಂದ ಶಾಸಕರಿಗೆ ಸನ್ಮಾನ

ರಾಯಚೂರು,ಜೂ.೦೩-
ಇಂದು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೂತನವಾಗಿ ವಿಧಾನಸಭೆಗೆ ರಾಯಚೂರು ನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ ಎಸ್. ಶಿವರಾಜ್ ಪಾಟೀಲ್ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಶಿವರಾಜ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ಜೊತೆಯಾಗಿರುತ್ತೇನೆ. ಕನ್ನಡಭಾಷೆ, ನೆಲ ಜಲ ಸಂಸ್ಕೃತಿ ಬೆಳೆಸುವ ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಸೇವೆ ಮಾಡುತ್ತಿದೆ.ಇಂತ ಕನ್ನಡ ಉಳಿಸುವ ಕಾರ್ಯದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಸದಾ ನಾನು ಇರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ, ಸಾಹಿತಿಗಳಾದ ವೀರ ಹನುಮಾನ, ಈರಣ್ಣ ಬೆಂಗಾಲಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷರಾದ ಜಿ. ಸುರೇಶ್,ಮತ್ತು ನಾಗಪ್ಪ ಹೊರಪ್ಯಾಟಿ, ದಂಡಪ್ಪ ಬಿರಾದರ್, ರೇಖಾ ಬಡಿಗೇರ್, ರಾವುತರಾವ್ ಬರೂರ, ಶಾಂತ ಕುಲಕರ್ಣಿ ವಿಜಯರಾಜೇಂದ್ರ,ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಇದ್ದರು.