ಕಸಾಪ ರಾಜ್ಯಾಧ್ಯಕ್ಷ ಚುನಾವಣೆ:ಶಿವರಾಜ ಪಾಟೀಲ್ ಸ್ಫರ್ಧೆ

ರಾಯಚೂರು.ಏ.೮.ಕೇಂದ್ರ ಕನ್ನಡ ಸಾಹಿತ್ಯ ಕನ್ನಡ ಪರಿಷತ್ತು ಚುನಾವಣೆಯು ಮೇ.೯ರಂದು ನಡೆಯಲಿದ್ದು ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ದಿಸಿಲಿದ್ದೇನೆ ಎಂದು ಪ್ರೊ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕನ್ನಡ ಇತಿಹಾಸದಲ್ಲಿ ಕಳೆದ ೧೦೫ ವರ್ಷಗಳಿಂದ ಕಲ್ಯಾಣ ಕರ್ನಾಟಕದ ಯಾವುದೇ ಸಾಹಿತಿಗಳಿಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿಲ್ಲ.ನಾನು ಕನ್ನಡ ವಿಷಯದಲ್ಲಿ ಅಭ್ಯಾಸಮಾಡಿ ಸುಮಾರು ೪೨ ಪುಸ್ತಕಗಳನ್ನು ಬರೆದಿದ್ದೇನೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು ಸಾಹಿತಿಗಳಿಗೆ ಯಾವುದೇ ಸ್ತನ ದೊರೆತಿಲ್ಲ ನಮಗೆ ಮಲತಾಯಿ ದೊರಣೆ ಮಾಡುತ್ತಿದ್ದರೆ,ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ದಿನಗಳಲ್ಲಿ ಸಾಹಿತಿಗಳಿಗೆ ಸ್ಥಾನ ದೊರೆಯುತ್ತಿಲ್ಲ, ಬೇರೆ ಯಾರೋ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ತುನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ಮನು ಬಳೆಗೇರ ಅವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷರ ಅವಧಿಯನ್ನು ೫ ವರ್ಷಕ್ಕೆ ತಂದಿದ್ದಾರೆ ನಾನು ಅಧ್ಯಕ್ಷರಾರೆ ೩ ವರ್ಷ ಮಾಡುತ್ತೇನೆ. ಹೊಸ ಸದಸ್ಯತ್ವ ಹೊಂದಿದದವರಿಗೆ ಮರು ಕ್ಷಣವೇ ಮಾತದಾನದ ಅಧಿಕಾರವನ್ನು ನೀಡುತ್ತೇವೆ.
ಕಲ್ಯಾಣ ಕರ್ನಾಟಕ ಜನರಿಗೆ ಅನುಕುಲ ವಾಗುವಂತೆ ಬೆಳಗಾವಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಶಾಖೆಯನ್ನು ಸ್ಥಾಪಿಸಿ ಸುಮಾರು ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಡಾ.ಎಂ.ಎಂ.ಕಲ್ಬುರ್ಗಿ ಸ್ಮಾರಕ ವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಪಾಪತಿ ಶಾಸ್ತ್ರಿ, ಪರಮೇಶ್ವರ ಸಾಲಿಮಠ,ಮಲ್ಲಣ ಗೌಡ,ಡಾ.ಮಾರುತಿ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.