ಕಸಾಪ ರಾಜ್ಯಾಧ್ಯಕ್ಷರ ಚುನಾವಣೆ:ಪ್ರೋ. ಶಿವರಾಜ್ ಪಾಟೀಲ್ ಸ್ಪರ್ಧೆ

ರಾಯಚೂರು, ಏ.೧೮-ಮೇ ೯ ರಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಯಲಿದ್ದು,ಕನ್ನಡ ಸಾಹಿತ್ಯ ಪರಿಷತ್‌ಗೆ ೧೦೫ ವರ್ಷ ಕಳೆದರೂ ಕಲ್ಯಾಣ ಕರ್ನಾಟಕ ಭಾಗದ ಒಬ್ಬರು ಕೂಡ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ.ಮೊದಲ ಭಾರಿಗೆ ಕೇಂದ್ರ ಕನ್ನಡ ಪರಿಷತ್ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಶಿವರಾಜ ಪಾಟೀಲ್
ಸ್ಪರ್ದಿಸಿದ್ದು ಸದಸ್ಯರು.ಮತ ನೀಡಬೇಕೆಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾ ಸಂಸ್ಥೆಗಳ ಒಕ್ಕೂಟ ಕಲಬುರ್ಗ ವಿಭಾಗದ ಅಧ್ಯಕ್ಷ ಶಂಕರ ಕೊಡ್ಲಾ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ದವರಾದ ಸಾಹಿತಿಗಳು ಇದುವರೆಗೂ ಯಾರು ಕೂಡ ಚುನಾವಣೆಗೆ ಸ್ಪರ್ಧಿಸಿಲ್ಲ ಈ ಬಾರಿ ಪ್ರೊ. ಶಿವರಾಜ್ ಪಾಟೀಲ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.ಸದಸ್ಯರು ಈ ಬಾರಿ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಾಹಿತಿಗಳಲ್ಲದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು ಜನರು ಅವರನ್ನು ಆಯ್ಕೆ ಮಾಡಬಾರದು.
ಮನು ಬಳಿಗಾರ ಅವಧಿಯಲ್ಲಿ ೩ ವರ್ಷದ ವಿಸ್ತರಿಸಿಕೊಂಡ ಅವಧಿ ಪುನಃ ೫ ವರ್ಷಕ್ಕೆ ವಿಸ್ತರಿಸಿಕೊಂಡಿದ್ದಾರೆ ಎಂದರು.
ಕಸಾಪ ಅಜೀವ ಸದಸ್ಯರಾದ ಮಾರನೇ ದಿನದಿಂದಲೇ ಮತದಾನದ ಹಕ್ಕು ತಿದ್ದುಪಡಿ ತರಲಾಗುವುದು. ಧಾರವಾಡದಲ್ಲಿ ವಿಶ್ವ ಕವಿಸಮ್ಮೇಳನ ಏರ್ಪಡಿಸಲಾಗುವುದು.ಲೇಖಕರ ಪ್ರಕಾಶಕರಾಗಿ ಪುಸ್ತಕ ಮುದ್ರಿಸಿದರೆ ಒಂದು ಬಾರಿ ಅವರಿಗೆ ೫ ಸಾವಿರ ರೂ ಪ್ರೋತ್ಸಾಹಧನ ನೀಡಲಾಗುವುದು ಹಾಗೂ ಕನ್ನಡಪರ ಚಟುವಟಿಕೆಗಳಿಗೆ ಸಂಘ-ಸಂಸ್ಥೆಗಳಿಗೆ ಒಂದು ಬಾರಿ ೧೦ ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ರಾಜ್ಯಮಟ್ಟದ ಮಹಿಳಾ ಸಾಹಿತಿಗೆ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ನಿಬಂಧನೆ ತಿದ್ದುಪಡಿ ತರುವುದು. ಸರಕಾರದ ಸಹಾಯ ವಿಲ್ಲದೆ ಅ.ಭಾ.ಕ.ಸಾ. ಸಮ್ಮೇಳನವನ್ನು ಏರ್ಪಡಿಸಲಾಗುವುದು. ಗೋವಾ, ದೆಹಲಿ,ಮುಂಬೈ ಗಳಲ್ಲಿನ ಕನ್ನಡ ಸಮ್ಮೇಳನಗಳು ಏರ್ಪಡಿಸಲಾಗುವುದು ಎಂದರು.
ಪ್ರೊ.ಶಿವರಾಜ್ ಪಾಟೀಲರನ್ನು ಎಲ್ಲಾ ಪರಿಷತ್ ಸದಸ್ಯರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.