ಕಸಾಪ ಮಾರ್ಗ ದರ್ಶನ ಸಮಿತಿ ಸದಸ್ಯರಾಗಿ ಅಮರೇಶ, ಮಹೇಶ ಜೋಷಿ

ಸಿಂಧನೂರ.ಸೆ.೨೩- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮಾರ್ಗ ದರ್ಶನ ಸಮಿತಿಯ ಸದಸ್ಯರನ್ನಾಗಿ ಎನ್ ಅಮರೇಶ ಶಿವನಾಗಪ್ಪ ಇವರನ್ನು ನೇಮಕ ಮಾಡಲಾಗಿದೆ ಎಂದ ಕಸಾಪ ರಾಜ್ಯ ಅಧ್ಯಕ್ಷರಾದ ಡಾ.ನಾಡೋಜ ಮಹೇಶ ಜೋಷಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಕಲೆ ಸಂಸ್ಕೃತಿ ಜಾನಪದ ರಕ್ಷಣೆ ಹಾಗೂ ಪ್ರಸಾರ ಮಾಡುವ ಜೊತೆಗೆ ಕಸಾಪ ಕಟ್ಟಿ ಬೆಳೆಸುವ ಜವಾಬ್ದಾರಿಯ ಅಮರೇಶ ಅವರಿಗೆ ನೀಡಲಾಗಿದೆ ಕನ್ನಡ ಉಳಿವಿಗಾಗಿ ಅವರು ಶ್ರಮಿಸಬೇಕಾಗಿದೆ ಎಂದರು. ಎನ್ ಅಮರೇಶ ಶಿವನಾಗಪ್ಪ ಅವರಿಗೆ ಕಸಾಪ ರಾಜ್ಯ ಮಾರ್ಗ ದರ್ಶನ ಸಮಿತಿಯ ಸದಸ್ಯರಾಗಿ ಆಯ್ಕೆ ಯಾಗಿದಕ್ಕೆ ಅವರ ಅಭಿಮಾನಿಗಳು ಹಿತೈಷಿಗಳು ಗೆಳೆಯರು ಸಂತೋಷ ಗೊಂಡು ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದ್ದಾರೆ.