
ಮಾನ್ವಿ,ಮಾ.೧೦- ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಮುಜೀಬ್ ಇವರ ತಾಯಿ ಜೈಲಾಬೀ (೮೮) ಗುರುವಾರದಂದು ಸಂಜೆ ವಯೋಸಹಜದಿಂದ ಮೃತರಾಗಿದ್ದು ಇವರಿಗೆ ಐದು ಜನರು ಪುತ್ರರು, ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ ಆದರಿಂದ ತಾಲೂಕಿನ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮೃತದೇಹದ ಅಂತ್ಯಕ್ರಿಯೆ ನಡೆದಿದ್ದು ಕಸಪಾದ ಅನೇಕರು ಸೇರಿದಂತೆ ತಾಲೂಕಿನ ಅನೇಕರು ಭಾಗವಹಿಸಿದ್ದರು.