ಕಸಾಪ ಮತಗಟ್ಟೆ ಪುರಸಭೆ ಕಚೇರಿಗೆ ಸ್ಥಳಾಂತರಿಸಲು ಆಗ್ರಹ

ಕಂಪ್ಲಿ ಏ 02 : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷರ ಚುನಾವಣಾ ಮತಗಟ್ಟೆಯನ್ನು ಪುರಸಭೆ ಕಚೇರಿ ಆವರಣದಲ್ಲಿ ತೆರೆಯಬೇಕು ಎಂದು ಇಲ್ಲಿನ ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್ ಒತ್ತಾಯಿಸಿದರು.
ಬೆಂಗಳೂರಿನ ಕಸಾಪ ಕೇಂದ್ರ ಚುನಾವಣಾಧಿಕಾರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಇವರಿಗೆ ಗುರುವಾರ ಸಲ್ಲಿಸಿ, ಈ ಹಿಂದೆ ಪುರಸಭೆ ಕಚೇರಿ ಆವರಣದಲ್ಲಿ ಕಸಾಪ ಚುನಾವಣೆ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಇದೀಗ ನಾಡ ಕಚೇರಿಗೆ ಸ್ಥಳಾಂತರಿಸಿದ್ದರಿಂದ ಕಸಾಪ ಮತದಾರರಿಗೆ ತೊಂದರೆಯಾಗುತ್ತದೆ. ಪುರಸಭೆ ಕಚೇರಿ ಪಟ್ಟಣ ಹೃದಯಭಾಗದಲ್ಲಿದ್ದು ಕಸಾಪ ಮತದಾರರಿಗೆ ಮತದಾನಕ್ಕೆ ತುಂಬಾ ಅನುಕೂಲವಾಗುತ್ತದೆ. ಮೇ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು ದೂರದ ನಾಡಕಚೇರಿಯಲ್ಲಿನ ಮತಗಟ್ಟೆಗೆ ಮತದಾರರು ಬರುವುದು ತ್ರಾಸದಾಯಕವಾಗುತ್ತದೆ. ಕಂಪ್ಲಿ ತಾಲೂಕಿನ ಅಂತಿಮ ಮತದಾರರ ಪಟ್ಟಿಯಲ್ಲಿ 602ಮತದಾರರಿದ್ದು, ಮತದಾರರ ಅನುಕೂಲಕ್ಕಾಗಿ ಪುರಸಭೆ ಕಚೇರಿಯಲ್ಲಿಯೇ ಕಸಾಪ ಮತಗಟ್ಟೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ಜಿ.ಚಿತ್ರಗಾರ್, ಪ್ರಮುಖರಾದ ಅಂಬಿಗರ ಮಂಜುನಾಥ, ಬಂಗಿ ದೊಡ್ಡ ಮಂಜುನಾಥ, ಈರಪ್ಪ ಸೊರಟೂರ, ಎಸ್.ಡಿ.ಬಸವರಾಜ್, ರಾಜು ಬಿಲಂಕರ್, ಎಚ್.ಪಿ.ಶಿಕಾರಿರಾಮು ಅಯ್ಯೋದಿ ರಮೇಶ್, ಎ.ಶಂಕ್ರಪ್ಪ, ಎ.ನಿರಂಜನಕುಮಾರ್, ಕೆ.ಚಂದ್ರಶೇಖರ್, ಪಿ.ಬ್ರಹ್ಮಯ್ಯ, ಕೆ.ವಿ.ಸಂದೀಪ್ ಸೇರೊದಂತೆ ಅನೇಕರಿದ್ದರು.