ಕಸಾಪ ಬೆಳವಣಿಗೆ ನನ್ನ ಉದ್ದೇಶ; ಶಿವಕುಮಾರ್ ಕುರ್ಕಿ

ಜಗಳೂರು.ಏ.೨೦;  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎರಡು ಬಾರಿ ಸೋತರು ಕಂಗೆಡದೆ ಕನ್ನಾಡಿಭಿಮಾನಿಗಳ ಸಾಹಿತ್ಯಾಭಿಮಾನಿಗಳೂ ಸೇರಿದಂತೆ ಅಜೀವ ಸದಸ್ಯರುಗಳ ಮನವಿ ಮೇರೆಗೆ ಮೂರನೇ ಬಾರಿಗೆ ಸ್ಪರ್ದಿಸಿರುವ ನನಗೆ ಮತ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆ ಸಹಕರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ನ ಅಜೀವ ಸದಸ್ಯರಗಳಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್.ಶಿವಕುಮಾರಸ್ವಾಮಿ ಕುರ್ಕಿ ಮನವಿ ಮಾಡಿಕೊಂಡರು.ಪಟ್ಟಣದ ನಾಲಂದ ಕಾಲೇಜುಗೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ ನ ಅಜೀವ ಸದಸ್ಯರಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆಗೆ ಸದಾ ಸಿದ್ದನಿರುವ ನಾನು ಹಿಂದೆ ಆಡಳಿತ ಮಾಡಿರುವ ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಈ ಬಗ್ಗೆ ಹಿಂದೆ ನಾನು ತಿಳಿಸಿದ್ದೇನೆ. ಈಗ ನನ್ನ ಗುರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಗುರಿಯನ್ನು 11 ಸಾವಿರದಿಂದ 20 ಸಾವಿರ ವರೆಗೆ ಮಾಡುತ್ತೇನೆ.ಜಿಲ್ಲೆ ತಾಲ್ಲೂಕು ಸಮಿತಿಗಳ ಜೊತೆ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದ ಘಟಕಗಳ ಸ್ಥಾಪಿಸಿ,ಯುವಕ ಯುವತಿಯರು ಹಾಗೂ ಮಹಿಳೆಯರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಎಲ್ಲಾ ಘಟಕಗಳಲ್ಲೂ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುವುದು ಸೇರಿದಂತೆ ಎಲ್ಲಾ ರೀತಿಯ ಬೆಳವಣಿಗೆ ನಿಮ್ಮಗಳ ಆಸೆಯಂತೆ ಮಾಡಲಿದ್ದು ನನಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ನಾಲಂದ ಕಾಲೇಜು ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಮಾತನಾಡಿ ಆರ್.ಶಿವಕುಮಾರಸ್ವಾಮಿ ಕುರ್ಕಿ ಗೆದ್ದರೆನಿಜವಾಗಲು ಕನ್ನಡ ಸಾಹಿತ್ಯ ಪರಿಷತ್ ಗೆದ್ದಂತೆ. ಜಾತಿ ಆಧಾರದ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆ ನಡೆಯಬಾರದು.ಮಾನದಂಡದ ಆಧಾರದ ಮೇಲೆ ನೆಡೆಯಬೇಕು.ಅಂತವರಿಗೆ ಮತನೀಡಬೇಕೆಂದು ನಮ್ಮ ಗುರುಗಳಾದ ಟಿ.ತಿಪ್ಪೇಸ್ವಾಮಿಯವರು ತಿಳಿಸಿದ್ದರು. ನಿಮ್ಮ ಬೆಂಬಲ ಸದಾ ಇರುತ್ತದೆ. ಗೆದ್ದು ಸಾಹಿತ್ಯ ಬೆಳವಣಿಗೆಗೆ ದಾರಿ ದೀಪವಾಗಬೇಕೆಂದರು.ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ್‌ಲಕ್ಕೋಳ್, ಎಂ.ಎಸ್.ಪಾಟೀಲ್, ನಾಗಲಿಂಗಪ್ಪ, ಬಾಲರಾಜ್ ಮತಯಾಚನೆ ಸಭೆಯಲ್ಲಿ ಬೆಂಬಲ ಸೂಚಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಉಪನ್ಯಾಸಕ ಸಂಘದ ಅಧ್ಯಕ್ಷ ಸಿ.ಬಿ.ರವಿ, ಉಪನ್ಯಾಸಕರಾದ ಬಿ.ಎನ್.ಎಂ.ಸ್ವಾಮಿ, ಬಸವರಾಜ್, ರಮೇಶ್, ಪರಮೇಶ್ವರಪ್ಪ ,ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.