ಕಸಾಪ ಪ್ರತಿಭಾ ಸಂಪನ್ನರಿಗೆ ವೇದಿಕೆಯಾಗಲಿ: ಪಾಟೀಲ


ಲಕ್ಷ್ಮೇಶ್ವರ, ನ29: ಕನ್ನಡ ಸಾಹಿತ್ಯ ಪರಿಷತ್ತು ಗದಗ ಜಿಲ್ಲೆಯ ಸಾಹಿತಿಗಳ ಕಲಾವಿದರ ಸಾಂಸ್ಕೃತಿಕ ಪರಿಸರದ ಪ್ರತಿಭಾ ಸಂಪನ್ನ ರಿಗೆ ವೇದಿಕೆಯಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದ ಗೌಡ ಪಾಟೀಲ್ ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದಲ್ಲಿ ಸಾಹಿತ್ಯಾಸಕ್ತರು, ಸಾಹಿತಿಗಳು, ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಸಾಹಿತಿಗಳ ಸಾಹಿತ್ಯಾಸಕ್ತರ ನೇತೃತ್ವದಲ್ಲಿ ಸಂಘಟನೆ ಯಾಗಬೇಕು ಇದು ಸಾಧ್ಯವಾಗದಿದ್ದರೆ ಕಸಾಪ ಕೂಡ ರಾಜಕೀಯ ಮೇಲಾಟದ ಅಂಕಣವಾಗುವ ಅಪಾಯವಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯಪರಿಷತ್ತಿನ ಚಟುವಟಿಕೆಗಳನ್ನು ಮನೆ ಮನೆಗೆ, ಮನ ಮನಕೆ ತಲುಪಿಸುವ ಕೆಲಸವನ್ನು ಮಾಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕನ್ನಡದ ಬೆಳವಣಿಗೆಗಾಗಿ ಸಾಹಿತ್ಯದ ಬೆಳವಣಿಗೆಗಾಗಿ ಸಂಪೂರ್ಣ ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಜಿಲ್ಲೆಯ ಹಿರಿಯ ಸಾಹಿತಿಗಳು, ಕವಿಗಳು, ಜಾನಪದ ಕಲಾವಿದರು, ಯುವ ಕಲಾವಿದರು, ಯುವ ಸಾಹಿತಿಗಳು, ವಿದ್ಯಾರ್ಥಿಗಳು ಎಲ್ಲರಿಗೂ ಅವಕಾಶ ನೀಡಿ ಪೆÇ್ರೀತ್ಸಾಹಿಸುವದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ದೇವಣ್ಣ ಬಳಿಗಾರ, ಎಸ್‍ಎನ್ ಮಳಲಿ, ಮಹೇಶ್ ಹೊಗೆಸೊಪ್ಪಿನ, ಅಶ್ವಿನಿ ಅಂಕಲಕೋಟಿ, ಸೋಮಣ್ಣ ಮುಳಗುಂದ, ಬಸಣ್ಣ ಬೆಂಡಿಗೇರಿ, ಎ ಎನ್ ನಾವಿ, ಆರ್ ಎಂ ಹೊನಕೇರಿ, ಸಿದ್ದಲಿಂಗಯ್ಯ ಎಂ ಹುಲಗೂರ್ ಸೇರಿದಂತೆ ಅನೇಕರಿದ್ದರು.
ಈಶ್ವರ್ ಮೆಡ್ಲೇರಿ, ಎಸ್ ವಿ ಅಂಗಡಿ, ಮಜ್ಜಿಗುಡ್ಡ, ಅಶೋಕ ಸೊರಟೂರ ಕಾರ್ಯಕ್ರಮ ನಿರ್ವಹಿಸಿದರು.