ಕಸಾಪ ಪದಾಧಿಕಾರಿಗಳ ಪದಗ್ರಹಣ

ಸಿರವಾರ,ಆ.೦೫- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಣ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ಶನಿವಾರ ನಡೆಯಿತು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಆಶಯ ನುಡಿಗಳ ಮೂಲಕ ಪಟ್ಟಣಕ್ಕೆ ಕನ್ನಡ ಸಾಂಸ್ಕೃತಿಕ ಭವನ ಮಂಜೂರು ಹಾಗು ತಾಲೂಕು ಸಾಹಿತ್ಯ ಸಮ್ಮೇಳನ ಮಾಡಲು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾನ್ವಿ ಶಾಸಕರಾದ ಜಿ.ಹಂಪಯ್ಯ ನಾಯಕ ಮಾತನಾಡಿ ಕನ್ನಡ ಸಾಂಸ್ಕೃತಿಕ ಭವನ ಮಂಜೂರು ಹಾಗು ತಾಲೂಕು ಸಾಹಿತ್ಯ ಸಮ್ಮೇಳನ ಮಾಡಲು ಅನುವು ಮಾಡಿಕೊಡಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ ಅಳ್ಳುಂಡಿ, ಪಿಎಸ್‌ಐ ಗುರುಚಂದ್ರ ಯಾದವ್, ಪ.ಪಂಚಾಯತ್ ನ ಅಧಿಕಾರಿ ಹಂಪಯ್ಯ ಪಾಟೀಲ್, ಕಥೆಗಾರ ಶರಣಬಸವ ಕೆ.ಗುಡದಿನ್ನಿ,
ಅತಿಥಿಗಳಾಗಿ ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷರಾದ ಚುಕ್ಕಿ ಸೂಗಪ್ಪ ಸಾಹುಕಾರ, ವೈ ಶರಣಪ್ಪ ನಾಯಕ ಗುಡದಿನ್ನಿ, ಜಿ.ಲೋಕರಡ್ಡಿ, ಬ್ರಿಜೇಶ್ ಪಾಟೀಲ, ಅರಿಕೇರಿ ಶಿವಶರಣ ಸಾಹುಕಾರ, ದೇವರಾಜ ನಾಯಕ ಕುರುಕುಂದ, ಎಚ್.ಶಿವರಾಜ, ಪ್ರಕಾಶ್ ಪಾಟೀಲ್, ಬೆಳವಿನೂರ ಶಿವರಾಜ, ಮೌನೇಶ ಹಿರೇಹಣಗಿ, ಕೇಶಪ್ಪ ಕಮ್ಮಾರ, ರಾಮಣ್ಣ ಮಡಿವಾಳ,
ಪ.ಪಂ.ಸದಸ್ಯರಾದ ಹಸೇನಲಿಸಾಬ್, ಹಾಜಿ ಚೌದ್ರಿ, ಸೂರಿ ದುರುಗಣ್ಣ ನಾಯಕ, ಹಾಗು ಜ್ಞಾನಮಿತ್ರ, ರಾಘವೇಂದ್ರ ಖಾಜನಗೌಡ, ಫಕ್ರುದ್ದೀನ್ ಮರಡಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.