ಕಸಾಪ ನೂತನ ಅಧ್ಯಕ್ಷರಿಗೆ ರಾಘವ ಅಸೋಸಿಯೇಷನ್ ಗೌರವ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 25 : ಕನ್ನಡ ಸಾಹಿತ್ಯ ಪರಿಷತ್ತಿನ  ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ  ನಿಷ್ಠಿ ರುದ್ರಪ್ಪ ಅವರಿಗೆ ನಿನ್ನೆ ಸಂಜೆ ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ನಿಂದ  ರಾಘವ ಕಲಾ ಮಂದಿರದ ಸಂಗೀತ ಹಾಲ್ ನಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.
 ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು, ಸಾಹಿತ್ಯ ಆಸಕ್ತರು,ಕಲಾಭಿಮಾನಿಗಳು, ಕಲಾವಿದರು ಭಾಗವಹಿಸಿ  ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ  ಅಖಿಲ ಭಾರತ ಕನ್ಬಡ  ಸಮ್ಮೇಳನ  ಬಳ್ಳಾರಿಯಲ್ಲಿ ಆಗಬೇಕು, ಮಕ್ಕಳಲ್ಲಿ ಕನ್ನಡ ಅಭಿರುಚಿ ಬೆಳೆಸಬೇಕು ಮತ್ತು ದತ್ತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಒತ್ತಾಯಿಸಿ ದರು.
ಸನ್ಮಾನಿತರಾಗಿ ಮಾತನಾಡಿದ  ನಿಷ್ಟಿ ರುದ್ರಪ್ಪ ಅವರು  ಬಳ್ಳಾರಿ ರಾಘವರು ಮತ್ತು ಜೋಳದರಾಶಿ ದೊಡ್ಡನಗೌಡ ಅವರುಗಳು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ ತಮ್ಮೆಲ್ಲರ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು.  ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಾನೆಂದು ಹೇಳಿದರು.
ರಾಘವ ಮೆಮೋರಿಯಲ್ ಅಸೋಶಿಯೇಶನ್ ಗೌರವಧ್ಯಕ್ಷ ರಾದ  ಕೆ.ಚನ್ನಪ್ಪ, ಅಧ್ಯಕ್ಷ ಕೆ. ಕೋಟೆಶ್ವರ ರಾವ್, ಗೌರವ ಕಾರ್ಯದರ್ಶಿ  ರಮೇಶ್ ಗೌಡ ಪಾಟೀಲ್, ಉಪಾಧ್ಯಕ್ಷ  ಎನ್ ಬಸವರಾಜ, ಜಂಟಿ ಕಾರ್ಯದರ್ಶಿ  ಕೆ ಪೊಂಪನಗೌಡ,ಕಸಾಪ
ಸದ್ಯಸರು, ಸಂಸ್ಥೆಯ ಸದಸ್ಯರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.