ಕಸಾಪ ನೂತನ ಅಧ್ಯಕ್ಷರಾಗಿ ಬಿ.ವಾಮದೇವಪ್ಪ ಪದಗ್ರಹಣ


ದಾವಣಗೆರೆ.ನ.೨೫; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿರಿಮನೆಯಾದರೆ ಕನ್ನಡ ಸಾಹಿತ್ಯ ಪರಿಷತ್ತು ಗುರುಮನೆ ಇದ್ದಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಹೇಳಿದರು.
ನಗರದ ಕುವೆಂಪು ಕನ್ನಡಭವನದಲ್ಲಿಂದು  ಕಸಾಪ ನೂತನ ಅಧ್ಯಕ್ಷರಾದ ಬಿ.ವಾಮದೇವಪ್ಪ ಅವರಿಗೆ ಕಾರ್ಯಭಾರ ಹಸ್ತಾಂತರಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ.ಸಾಹಿತ್ಯ ಪರಿಷತ್ ಆಡಳಿತವನ್ನು ಈ ಹಿಂದಿನ ಅಧ್ಯಕ್ಷರಾದ ಡಾ.ಮಂಜುನಾಥ್ ಕುರ್ಕಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ ಇದನ್ನು ಸದ್ಬಳಕೆ ಮಾಡಬೇಕು.  ಬೇರೆ ಜಿಲ್ಲೆಗಳಲ್ಲಿ ಕಸಾಪಕ್ಕೆ
ಸುಸಜ್ಜಿತ ವ್ಯವಸ್ಥೆ ಇಲ್ಲ ಆದರೆ ದಾವಣಗೆರೆ ನೂರಕ್ಕೆ ನೂರು ಉತ್ತಮ ವ್ಯವಸ್ಥೆ ಹೊಂದಿದೆ. ಇಲ್ಲಿ ಕನ್ನಡಭವನ ಇದೆ ಹಾಗೂ ನಿರ್ವಣಾ ವೆಚ್ಚ ಕಳೆದು ಆರ್ಥಿಕ ಸಂಪನ್ಮೂಲ ಹೊಂದಿದೆ. ದಾವಣಗೆರೆಯಲ್ಲಿರುವ ಕನ್ನಡಾಭಿಮಾನಿಗಳು ಪ್ರಜ್ಞಾವಂತರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಕನ್ನಡಭವನಕ್ಕೆ ಕೆಲವು ಮೂಲಭೂತ ಸೌಕರ್ಯಗಳ ಅಗತ್ಯವಿದ್ದು ನೂತನ ಅಧ್ಯಕ್ಷರು ಒಂದು ಪ್ರಸ್ತಾವನೆ ಕಳಿಸಿದರೆ ಸರ್ಕಾರದ ಮಟ್ಟದಲ್ಲಿ ಮಾಡಿಸಿಕೊಡುವುದಾಗಿ ತಿಳಿಸಿದರು.
ಮಾಜಿ ಅಧ್ಯಕ್ಷರಾದ ಪ್ರೋ.ಎಸ್ ಬಿ ರಂಗನಾಥ್ ಮಾತನಾಡಿ ನಿರಂತರ ಬದಲಾವಣೆ ಅವಶ್ಯಕ.ಹಿಂದಿನ ಅಧ್ಯಕ್ಷರು ಸಾಕಷ್ಟು ಕೆಲಸ ಮಾಡಿದ್ದಾರೆ ಅದೇ ರೀತಿ ಈಗಿನ ಅಧ್ಯಕ್ಷರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಕಳೆದ ೨೫ ವರ್ಷದಿಂದ ಪರಿಷತ್ ನ  ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ದಾವಣಗೆರೆ ತಾಲ್ಲೂಕಿನ ಅಧ್ಯಕ್ಷರಾಗಿ ಬಿ.ವಾಮದೇವಪ್ಪ ಅವರು ವಿನೂತನ ರೀತಿಯಲ್ಲಿ ಕಾರ್ಯಕ್ರಮ ಮಾಡಿ ರಾಜ್ಯಕ್ಜೆ ಮಾದರಿಯಾಗಿದ್ದಾರೆ ಅನೇಕ ಕನಸು ಹೊತ್ತಿದ್ದಾರೆ.ಬೇರೆ ಹುದ್ದೆಯಂತೆ ಲಾಭದಾಯಕವಲ್ಲ. ಕನ್ನಡ ಸೇವೆಗೆ ಸಿಗುವ ಅವಕಾಶ ಮಾತ್ರ .ನಮ್ಮ ನಾಡಿನ ಭಾಷೆ, ನೀರು, ಗಡಿನಾಡ ಸಮಸ್ಯೆ, ಉದ್ಯೋಗದ ಸಮಸ್ಯೆ ನಿವಾರಣೆ ಮಾಡಬೇಕಿದೆ.  ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ ಇಂದಿನ ಅಧ್ಯಕ್ಷರು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು.ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಬಿ.ವಾಮದೇವಪ್ಪ, ನಿಕಟಪೂರ್ವ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ,ಅಣಬೇರು ರಾಜಣ್ಣ,ಎ.ಆರ್ ಉಜ್ಜಿನಪ್ಪ,ಎನ್.ಎಸ್ ರಾಜು, ಅಂಗಡಿ ರೇವಣಸಿದ್ದಪ್ಪ,ಎನ್.ಜಿ ಪುಟ್ಟಸ್ವಾಮಿ,ಕೆ.ಸಿದ್ದಲಿಂಗಪ್ಪ,ಸಿರಾಜ್ ಅಹ್ಮದ್ ಮತ್ತಿತರರಿದ್ದರು.
ಇದೇ ವೇಳೆ ಕಸಾಪ ಸದಸ್ಯರು ವೇದಿಕೆಗೆ ಆಗಮಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
————