ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಲೇಖಕ , ರಂಗಕರ್ಮಿ ಜಗದೀಶ್ ಸ್ಪಧೆ೯

ಬಳ್ಳಾರಿ, ಮಾ.24- ನಗರದ ಬ್ಯಾಂಕ್ ನ ನಿವೃತ್ತ ಉದ್ಯೋಗಿ, ಲೇಖಕ ,ರಂಗಕರ್ಮಿ ಕೆ. ಜಗದೀಶ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ
ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ನಿಷ್ಪರತೆ, ಪ್ರಾಮಾಣಿಕತೆ ಬಗ್ಗೆ ಹೋರಾಟ ಮಾಡುವ ಮನೋಭಾವವನ್ನು ಹೊಂದಿದ್ದಾರೆ. ವಿವಿಧ ದಿನಪತ್ರಿಕೆ ನಿಯತಕಾಲಿಕಗಳಿಗೆ ಕಥೆ-ಕವನಗಳನ್ನು 1983 ರಿಂದಲೂ ಪ್ರಕಟಿಸುತ್ತಾ ಬಂದಿರುವ ಇವರು, ಜಿಲ್ಲೆಯ ಅವಧೂತರಾದ ಚೆಳಗುರ್ಕಿ ಎರ್ರಿತಾತ , ಶರಣ ಸಕ್ಕರೆ ಕರಡೀಶ, ಗೂಳ್ಯೆಂ ಗಾದಿಲಿಂಗ ತಾತ ಮೊದಲಾದ ನಾಟಕಗಳ ರಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವನ್ನು ನಾಟಕ ರೂಪಕ್ಕೆ ತಂದು ಇದುವರೆಗೆ 770 ಕ್ಕೂ ಹೆಚ್ಚು ಪ್ರದರ್ಶನವನ್ನು ತಮ್ಮ ಅಭಿನಯ ಕಲಾಕೇಂದ್ರ, ಮಯೂರ ಕಲಾ ಸಂಘದ ಮೂಲಕ ನೀಡಿದ್ದಾರೆ.
ತಮ್ಮ ಎಂಟನೇ ವಯಸ್ಸಿನಲ್ಲಿಯೇ ಬಾಲನಟನಾಗಿ ಗಿರಿಜಾ ಕಲ್ಯಾಣದ ನಾಟಕದ ಮೂಲಕ ರಂಗ ಪ್ರವೇಶಿಸಿರುವ ಇವರು ಒಂದು ಊರಿನ ಕಥೆ, ದಾರಿದೀಪ, ಪುರಂದರದಾಸರು, ಶಾಂತಿ ಎಲ್ಲಿದೆ ಹೀಗೆ ಹತ್ತಾರು ನಾಟಕಗಳನ್ನು ರಚಿಸಿದ್ದಾರೆ, ನಿರ್ದೇಶಿಸಿದ್ದಾರೆ, ಅಭಿನಯಿಸಿದ್ದಾರೆ. ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಅಭಿಮಾನಿಗಳು, ಪರಿಷತ್ತಿನ ಅನೇಕ ಸದಸ್ಯರು, ಹಿರಿಯರ ಸಲಹೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ.
ಕೆ.ಜಗದೀಶ್ ಬಳ್ಳಾರಿ .