ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷರಿಂದ ಮತಯಾಚನೆ

ಸಂಜೆವಾಣಿ ಪ್ರತಿನಿಧಿಯಿಂದ)
ಸಿರಿಗೇರಿ ನ, 10. ಗ್ರಾಮ ಮತ್ತು ಸುತ್ತಲಿನ ಕರೂರು, ದರೂರು, ಶಾನವಾಸಪುರ, ಗೇಣಿಕೆಹಾಳು, ಕೋಂಚಿಗೇರಿ, ದಾಸಾಪುರ ಇತರೆ ಗ್ರಾಮಗಳಲ್ಲಿ ನ.8 ರಂದು ಕಸಾಪ ಜಿಲ್ಲಾಧ್ಯಕ್ಷ ಅಭ್ಯರ್ಥಿ ಟಿ.ಎಂ.ಪಂಪಾಪತಿ ಪರವಾಗಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ,  ಸಿರುಗುಪ್ಪ ತಾ.ಅಧ್ಯಕ್ಷ ಎಸ್. ಎಂ.ನಾಗರಾಜಸ್ವಾಮಿ ಮತ್ತು ಹೋಬಳಿ ಘಟಕ ನಿ.ಪೂ.ಅಧ್ಯಕ್ಷರು ಮತಯಾಚನೆ ಮಾಡಿದರು. ಇದೇವೇಳೆ ಅಭ್ಯರ್ಥಿ ಪಂಪಾಪತಿ ಸದಸ್ಯರಲ್ಲಿ ಮತಕೇಳಿ, ಕಸಾಪ ದಲ್ಲಿ ಹಲವು ಕ್ಷೇತ್ರ ಪದಾಧಿಕಾರಿಯಾಗಿ ಕೆಲಸ ಮಾಡಿ ಕನ್ನಡಪರಕ್ಕಾಗಿ ಮುಂದೆ ಮಾಡಬಹುದಾದ ಯೋಜನೆಗಳನ್ನು ತಿಳಿಸಿದರು. ಮತಯಾಚನೆಯಲ್ಲಿ ಹಿಂದಿನ ಅವಧಿಯ ಪದಾಧಿಕಾರಿಗಳು, ಅಜೀವ ಸದಸ್ಯರು ಪಾಲ್ಗೊಂಡಿದ್ದರು.